ಸಂತರ ಪರ ವಾದ ಮಂಡಿಸುವವರ್ಯಾರು?

Pattabhi Ram
Published on

ಚಿತ್ರದುರ್ಗ: ಟೆರರಿಸ್ಟ್‌ಗಳ ಪರವಾಗಿ ಭಾರತ ದೇಶದಲ್ಲಿ ವಕೀಲರು, ಸರ್ಕಾರವಿರುತ್ತೆ. ಅವರ ಪರ ವಾದ ಮಂಡಿಸಲು ಇಲ್ಲಿ ಅವಕಾಶವಿದೆ ಎಂದು ಆರ್‌ಎಸ್‌ಎಸ್‌ನ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿ ರಾಮ್ ಹೇಳಿದರು.

ಬಾಂಗ್ಲಾ ದೇಶದಲ್ಲಿನ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ನಗರದಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ರಾಮ-ಶಿವ ನಮ್ಮ ಕುಲದೈವವೆಂದು ಪ್ರತ್ಯೇಕವಾಗಿ ನಂಬಿ ದೇವರಿದ್ದಾನೆ ಎನ್ನುವವರನ್ನು, ಇಲ್ಲ ಎನ್ನುವವರನ್ನು ಹಾಗೂ ನಾನೇ ದೇವರು ಎನ್ನುವವರನ್ನು ಒಪ್ಪಿಕೊಂಡಿದ್ದೇವೆ. ಅಲ್ಲದೆ, ಭಯೋತ್ಪಾದಕರ ಪರ ವಾದ ಮಂಡಿಸುವವರಿಗೂ ಸುರಕ್ಷೆ ಇದೆ. ಎಲ್ಲರಿಗೂ ಅವಕಾಶ ನೀಡಿದ ದೇಶ ಭಾರತ ಎಂದರು.

ಆದರೆ, ಬಾಂಗ್ಲಾದಲ್ಲಿ ಸಂತರ ಪರ ವಾದ ಮಂಡಿಸಲು ಸಾಧ್ಯವಾಗದ ಸ್ಥಿತಿ ಇದೆ. ಇದಕ್ಕೆ ಅಲ್ಲಿನ ಸರ್ಕಾರ, ಸೈನ್ಯ, ಪೊಲೀಸ್ ವ್ಯವಸ್ಥೆ ಜವಾಬ್ದಾರಿಯಲ್ಲವೇ?. ಬದಲಿಗೆ ಮತಾಂಧರ ಪರವಿರುವುದು ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತದ್ದು ಎಂದು ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net