ಸಂತ ಸೇವಾಲಾಲ್ ಜಯಂತಿ 15ಕ್ಕೆ

Sevalal
Published on

ಚಿತ್ರದುರ್ಗ: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಫೆ. 15ರಂದು ಬೆಳಗ್ಗೆ 11ಕ್ಕೆ ಜಿಲ್ಲಾಡಳಿತದಿಂದ ಸಂತ ಸೇವಾಲಾಲ್ ಜಯಂತಿ ಹಮ್ಮಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.

ಜಯಂತಿ ಆಚರಿಸುವ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಗೀತಗಾಯನ ಮತ್ತು ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದರು.

ಜಯಂತಿ ವೇಳೆ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವಿಸಲು ಪ್ರತಿಭಾ ಪುರಸ್ಕಾರಕ್ಕೆ ಅವಕಾಶ ನೀಡಬೇಕು. ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾನರ್ ಅಳವಡಿಸಬೇಕು ಎಂದು ಬಂಜಾರ ಸಮುದಾಯದ ಮುಖಂಡರು ಮನವಿ ಮಾಡಿದರು.

ಬಂಜಾರ ಜಿಲ್ಲಾ ಸಂಘದ ಅಧ್ಯಕ್ಷ ಆರ್.ನಾಗೇಂದ್ರನಾಯ್ಕ್, ಪದಾಧಿಕಾರಿಗಳಾದ ಜಿ.ರಾಜನಾಯ್ಕ್, ಕೆ.ಮಂಜುನಾಥ ನಾಯ್ಕ್, ಮುಖಂಡರಾದ ನರೇನಹಳ್ಳಿ ಅರುಣ್‌ಕುಮಾರ್, ಪ್ರಕಾಶ್ ರಾಮನಾಯ್ಕ್, ಆರ್.ನಿಂಗಾನಾಯ್ಕ್, ಗಣೇಶ್ ನಾಯ್ಕ್, ತಿಪ್ಪೇಶ್ ನಾಯ್ಕ್, ಅನಿಲ್, ಹಾಲನಾಯ್ಕ್, ಸತೀಶ್‌ನಾಯ್ಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net