

ಚಾಮರಾಜನಗರ : ನಗರದ ಜೋಡಿ ರಸ್ತೆಯಲ್ಲಿರುವ ಸಂತ ಪೌಲರ ದೇವಾಲಯದ ವಾರ್ಷಿಕೋತ್ಸವದ ಪ್ರಯುಕ್ತ ಮೈಸೂರು ಕುವೆಂಪು ನಗರ ಸಹಾಯ ಮಾತೆ ದೇವಾಲಯದ ಗುರು ಡಾ.ಆರೋಗ್ಯ ಸ್ವಾಮಿ ನೇತೃತ್ವದಲ್ಲಿ ವಿವಿಧ ಧರ್ಮಕೇಂದ್ರಗಳ ಧರ್ಮಗುರುಗಳೊಂದಿಗೆ ಗಾಯನ ದಿವ್ಯ ಬಲಿಪೂಜೆ ಅರ್ಪಿಸಿದರು.
ಮೈಸೂರು ಹಾಗೂ ಊಟಿ ಧರ್ಮಪ್ರಾಂತ್ಯದ ವಿವಿಧ ಧರ್ಮಕೇಂದ್ರದ ಧರ್ಮಗುರುಗಳು ಪೂಜಾ ವಿಧಿ ವಿದಾನಗಳಲ್ಲಿ ಭಾಗವಹಿಸಿದ್ದರು. 6 ಮಕ್ಕಳಿಗೆ ಪರಮಪ್ರಸಾದ ಸಂಸ್ಕಾರ ನೀಡಲಾಯಿತು. ಸುತ್ತಮುತ್ತಲಿನ ಧರ್ಮಕೇಂದ್ರಗಳಿಂದ ಆಗಮಿಸಿದ ನೂರಾರು ಭಕ್ತರು ಭಕ್ತಿಭಾವದಲ್ಲಿ ಮಿಂದೆದ್ದರು. ಪೂಜಾ ಕಾರ್ಯಕ್ರಮಗಳ ಬಳಿಕ ಅಲಂಕೃತಗೊಂಡ ತೇರಿನಲ್ಲಿ ಸಂತ ಪೌಲರ ಪುತ್ಥಳಿ ಮೆರವಣಿಗೆ ಜೋಡಿ ರಸ್ತೆಯಲ್ಲಿ ಸಾಗಿ ಚರ್ಚ್ ಆವರಣ ಸೇರಿತು. ಮೆರವಣಿಗೆಯಲ್ಲೂ ನೂರಾರು ಭಕ್ತರು ಪಾಲ್ಗೊಂಡರು. ಕೊನೆಯಲ್ಲಿ ಪ್ರಸಾದ ವಿನಿಯೋಗದೊಂದಿಗೆ ಕಾರ್ಯಕ್ರಮ ಸಂಪನ್ನ ಗೊಂಡಿತು. ಮಹೋತ್ಸವದಲ್ಲಿ ಸ್ಥಳೀಯ ಧರ್ಮಕೇಂದ್ರದ ಗುರು ಸಿ. ಅಂತೋಣಪ್ಪ ಇತರ ಧರ್ಮಕೇಂದ್ರಗಳ ಗುರುಗಳಾದ ರಾಯಪ್ಪ, ಸಾಲೋಮನ್, ಗೆಬ್ರಿಯೆಲ್, ಬರ್ನಾಡ್ ಪ್ರಕಾಶ್, ಮಾಣಿಕ್ಯಂ, ಅಂತೋಣಿಸ್ವಾಮಿ, ಫ್ರಾನ್ಸಿಸ್, ಎಡ್ವರ್ಡ್, ಅಂತೋಣಿಸ್ವಾಮಿ, ಜೋಸ್ೆ, ಬೆನೆಡಿಕ್ಟ್, ಅಂತೋಣಿರಾಜ್, ಜಯಪೌಲ್ ಇತರರು ಇದ್ದರು.