ಸಂತ ಕವಿ ಸರ್ವಜ್ಞ ಜಯಂತಿ ಸರಳ ಆಚರಣೆ

20220220_155138
Published on

ಕಲಬುರಗಿ: ಕೋವಿಡ್ ಹಿನ್ನೆಲೆಯಲ್ಲಿ ಸಂತಕವಿ ಸರ್ವಜ್ಞ ಜಯಂತಿಯನ್ನು ಭಾನುವಾರ ಸರಳ ಮತ್ತು ಸಾಂಕೇತಿಕವಾಗಿ ಆಚರಿಸಲಾಯಿತು.

ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಗ್ರೇಡ್-2 ತಹಸೀಲ್ದಾರ್ ವೆಂಕನಗೌಡ ಸರ್ವಜ್ಞ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ್, ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ್, ಕುಂಬಾರ್ ಸಮಾಜದ ಜಿಲ್ಲಾಧ್ಯಕ್ಷ ಶಿವಶರಣಪ್ಪ ಕುಂಬಾರ್, ಉಪಾಧ್ಯಕ್ಷ ವಿಠ್ಠಲ್ ದಾವಣಕರ್, ಕಾರ್ಯದರ್ಶಿ ನಿಂಗಪ್ಪ ಕುಂಬಾರ್, ಶಿವಾನಂದ ಮಠಪತಿ, ನರಸಿಂಹ ಕುಂಬಾರ್ ಯಾನಾಗುಂದಿ, ದತ್ತಾತ್ರೇಯ ಕುಂಬಾರ ಬೊಮ್ಮನಳ್ಳಿ, ಶಿವಾನಂದ ಕುಂಬಾರ್, ಶಿವಪ್ಪ ಕುಂಬಾರ್ ಮಾದವಾರ್, ಶರಣಬಸಪ್ಪ ದಾವಣಕರ್ ಹೀರಾಪುರ, ಶಿವಾನಂದ ಕುಂಬಾರ್ ಹೀರಾಪುರ, ಅಶೋಕ ಕುಂಬಾರ್ ನಿಡಗುಂದಾ, ಮಹಾದೇವಪ್ಪ ಕುಂಬಾರ ಆಜಾದ್‌ಪುರ್, ಜಗನ್ನಾಥ ಚಿಂತಕೋಟಿ, ವಿಜಯಕುಮಾರ ಕೋಲಕುಂದಾ, ಅಪ್ಪಾರಾವ್ ಕುಂಬಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net