ಸಂತ ಅಂತೋಣಿ ಅದ್ದೂರಿ ವಾರ್ಷಿಕೋತ್ಸವ

08sunti05
Published on

ಸುಂಟಿಕೊಪ್ಪ: ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಪಾಲಕ ಸಂತ ಅಂತೋಣಿ ಅವರ ವಾರ್ಷಿಕೋತ್ಸವ ಭಾನುವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.


ಭಕ್ತರು ಅಂಬು ಕಾಣಿಕೆ, ಹರಕೆ ಸಲ್ಲಿಸಿದರು. ಆಡಂಬರ ಗಾಯನ ಬಲಿಪೂಜೆ ಮತ್ತು ಪರಮ ಪ್ರಸಾದ ಆರಾಧನೆಯನ್ನು ಮೈಸೂರು ಧರ್ಮಕ್ಷೇತ್ರದ ಗುರುಗಳಾದ ರೇವರೆಂಡ್ ಅಲ್ಪ್ರೆಡ್ ಜಾನ್ ಮೆಂಡಾನ್ಸಾ, ಮಡಿಕೇರಿ ವಲಯದ ಗುರುಗಳಾದ ಫಾದರ್ ದೀಪಕ್ ನೆರವೇರಿಸಿದರು.


ಬೀಟಿಕಟ್ಟೆ ದೇವಾಲಯದ ಜಾನ್ ಡಿಕುನ್ನ, ಕೂಡಿಗೆ ಚಾಲ್ಸ್ ನರೋನ, ಪೌಲ್ ಹೇರ್ಸ,7ನೇ ಹೊಸಕೋಟೆ ಸಂತ ಸೆಬಾಸ್ಟಿನ್ ದೇವಾಲಯದ ರೆ.ಫಾ.ಸುನಿಲ್,ಕುಶಾಲನಗರ ಸಂತ ಸೆಬಾಸ್ಟಿನ್ ದೇವಾಲಯದ ಫಾ.ಮಾರ್ಟಿನ್, ಮಡಿಕೇರಿ ಸಂತ ಮೈಕಲರ ದೇವಾಲಯದ ಸಹಾಯಕ ಗುರುಗಳಾದ ಫಾ.ನವೀನ್ ಬಾಲಕುಮಾರ್, ಜಾನ್ ಪೌಲ್, ಅಲ್ಪೆರ್ಡ್ ಪಿಂಟೋ, ಪಾದರ್ ರೇಗನ್, ಸಂತೋಷ್ ಹಾಗೂ ಸಂತ ಅಂತೋಣಿ ದೇವಾಲಯದ ಫಾದರ್ ಅರುಳ್ ಸೇಲ್ವಕುಮಾರ್ ಮತ್ತಿತರರು ಹಾಜರಿದ್ದರು.


ನಂತರ ವಿದ್ಯುತ್ ದೀಪಾಲಂಕೃತ ಮಂಟಪದಲ್ಲಿ ಪಾಲಕ ಸಂತ ಅಂತೋಣಿ ಮೂರ್ತಿಯನ್ನು ಇರಿಸಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net