ಸಂಡೇ ಕರ್ಫ್ಯೂಗೆ ಮಿಶ್ರ ಪ್ರತಿಕ್ರಿಯೆ

26 smg 3
Published on

ಶಿವಮೊಗ್ಗ: ಜಿಲ್ಲೆಯಲ್ಲಿ 4ನೇ ಸಂಡೇ ಕರ್ಫ್ಯೂಗೆ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಪ್ರಮುಖ ರಸ್ತೆಗಳಲ್ಲಿ ಬಂದ್ ಮಾಡಿದ್ದರಿಂದ ಅಡ್ಡ ರಸ್ತೆಗಳಲ್ಲೇ ಬೈಕ್, ಕಾರು, ಆಟೋ ಚಾಲಕರು ಸಂಚರಿಸಿದರು. ವ್ಯಾಪಾರ ವಹಿವಾಟು ಮಾತ್ರ ಸ್ತಬ್ಧವಾಗಿತ್ತು.

ಎಟಿಎಂ, ಮೆಡಿಕಲ್, ಆಸ್ಪತ್ರೆಗಳು ತೆರೆದಿದ್ದವು. ರಸ್ತೆಯಲ್ಲಿ ಅನಾವಶ್ಯಕವಾಗಿ ಓಡಾಡುವವರೇ ಹೆಚ್ಚಾಗಿದ್ದರು. ಕೆಲವೆಡೆ ಪೊಲೀಸರು ದಂಡ ವಿಧಿಸಿ, ವಾಹನಗಳನ್ನು ಜಪ್ತಿ ಮಾಡಿ ಬಿಸಿ ಮುಟ್ಟಿಸಿದರೂ ದಿನವಿಡೀ ಬೈಕ್, ಕಾರುಗಳಲ್ಲಿ ಸಂಚರಿಸುತ್ತಿದ್ದರು.

ಸಂಡೇ ಲಾಕ್​ಡೌನ್ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳು ಖಾಲಿ ಖಾಲಿಯಾಗಿದ್ದವು. ಖಾಸಗಿ ಮತ್ತು ಕೆಎಸ್​ಆರ್​ಟಿಸಿ ಬಸ್​ಗಳ ಓಡಾಟ ಇರಲಿಲ್ಲ. ಕುವೆಂಪು ರಸ್ತೆ, ಜೈಲ್ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಿತ್ತು.

ಕೆಲವರು ಸರ್ಕಾರದ ಆದೇಶವನ್ನು ಲೆಕ್ಕಿಸದೆ ಅನಗತ್ಯವಾಗಿ ಓಡಾಡುತ್ತಿದ್ದರು. ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಿದ್ದರೂ ಓಡಾಟಕ್ಕೆ ಮಾತ್ರ ಕಡಿವಾಣ ಬೀಳಲಿಲ್ಲ. ಕರೊನಾ ಸೋಂಕಿನ ಭಯೇ ಇಲ್ಲ ಎಂಬಂತೆ ಜನ ಸಂಚರಿಸá-ತ್ತಿದ್ದರು.

ಕರೊನಾ ಹಾವಳಿ ದಿನೇದಿನೆ ಏರಿಕೆ ಆಗುತ್ತಿದ್ದು, ಈಗಾಗಲೇ ಲಾಕ್​ಡೌನ್ ಸಂಪೂರ್ಣ ತೆರವುಗೊಳಿಸಲಾಗಿದೆ. ಭಾನುವಾರದ ಕರ್ಫ್ಯೂ ಜಾರಿಯಿಂದ ಅವಶ್ಯಕ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲ ಸೇವೆಗಳಿಗೆ ಜಿಲ್ಲೆಯಲ್ಲಿ ನಿರ್ಬಂಧವಿದ್ದರೂ ಪೊಲೀಸರ ಭಯ ಇಲ್ಲದೆ ಓಡಾಡಿದರು.

ಮೀನು-ಮಾಂಸ, ತರಕಾರಿ ಭರಾಟೆ: ಕಳೆದ ಮೂರು ಭಾನá-ವಾರದಂತೆ ಈ ಬಾರಿಯೂ ಕರ್ಫ್ಯೂ ಇದ್ದರೂ ಮಾಂಸದ ಅಂಗಡಿ ತೆರೆಯಲು ಅನುಮತಿ ನೀಡಿದ್ದರಿಂದ ಮೀನು, ಮಟನ್, ಚಿಕನ್ ಜತೆಗೆ ತರಕಾರಿ ಖರೀದಿಗೆ ಜನರು ಮುಗಿಬಿದ್ದಿದ್ದರು. ಅದರಲ್ಲೂ ಭಾನುವಾರ ಆಗಿದ್ದರಿಂದ ಕೆಲ ಮಳಿಗೆಗಳ ಎದá-ರು ಜನರು ಸರದಿಯಲ್ಲಿ ನಿಂತಿದ್ದರು. ವಿನೋಬನಗರ, ಜೈಲ್ ರಸ್ತೆ, ಲಷ್ಕರ್ ಮೊಹಲ್ಲಾ ಸೇರಿ ಹಲವೆಡೆ ಮೀನು, ಮಾಂಸ ಹಾಗೂ ತರಕಾರಿ ಖರೀದಿಗೆ ಮುಗಿ ಬಿದ್ದಿದ್ದರು. ಲಷ್ಕರ್ ಮೊಹಲ್ಲಾದಲ್ಲಿ ಪರಸ್ಪರ ಅಂತರ ಇಲ್ಲದೆ ಮೀನು ಖರೀದಿಸುತ್ತಿದ್ದ ಜನರನ್ನು ಚದುರಿಸಿದ ಪೊಲೀಸರು ಅಂಗಡಿಗಳನ್ನು ಬಂದ್ ಮಾಡಿಸಿದರು.

ಹಲವು ವಾಹನಗಳ ಜಪ್ತಿ: ಕರ್ಫ್ಯೂ ಇದ್ದರೂ ಅನಾವಶ್ಯಕವಾಗಿ ಓಡಾಡುತ್ತಿದ್ದ ನೂರಾರು ಬೈಕ್ ಮತ್ತು ಕಾರುಗಳನ್ನು ಪೊಲೀಸರು ತಡೆದು ಜಪ್ತಿ ಮಾಡಿದರು. ಅಶೋಕ ವೃತ್ತದ ಬಿ.ಎಚ್.ರಸ್ತೆ, ನೆಹರು ರಸ್ತೆ, ಗೋಪಿ ವೃತ್ತ, ಅಮೀರ್ ಅಹಮ್ಮದ್ ವೃತ್ತ ಸೇರಿ ಹಲವಡೆ ಬ್ಯಾರಿಕೇಡ್​ಗಳನ್ನು ಹಾಕಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಎಸ್ಪಿ ಕೆ.ಎಂ.ಶಾಂತರಾಜು, ಎಎಸ್ಪಿ ಡಾ. ಎಚ್.ಟಿ.ಶೇಖರ್ ಸೇರಿ ಹಿರಿಯ ಅಧಿಕಾರಿಗಳು ಸಂಡೇ ಕರ್ಫ್ಯೂ ಪರಿಶೀಲಿಸಿ ಅನಗತ್ಯವಾಗಿ ಸಂಚರಿಸುತ್ತಿದ್ದವರ ವಿರುದ್ಧ ಕ್ರಮ ಕೈಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net