

ಸಂಡೂರು: ಸಾಹಿತಿ ಡಾ.ವಸುಂಧರಾ ಭೂಪತಿ ಹಾಗೂ ಬಿಕೆಜಿ ಸಂಸ್ಥೆಯ ಡಾ.ಬಿ.ನಾಗನಗೌಡ ಅವರಿಗೆ ಗೌರವ ಡಾಕ್ಟರೇಟ್ ನೀಡುವ ಮೂಲಕ ವಿಎಸ್‌ಕೆ ವಿವಿ ತನ್ನ ಘನ ಹೆಚ್ಚಿಸಿಕೊಂಡಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಹೇಳಿದರು.
ಪಟ್ಟಣದ ಬಿಕೆಜಿ ಫಾರ್ಮ್ ಹೌಸ್‌ನಲ್ಲಿ ಕಸಾಪ ತಾಲೂಕು ಕಾರ್ಯಕಾರಿಣಿಯಲ್ಲಿ ಶನಿವಾರ ಮಾತನಾಡಿದರು. ನಾಗನಗೌಡ ಮೃದು ಸ್ವಭಾವದವರಾಗಿದ್ದಾರೆ. ರಾಜ್ಯದಲ್ಲಿ ಸಂಡೂರು ತಾಲೂಕಿನಲ್ಲಿಯೇ ಅತಿ ಹೆಚ್ಚು 46 ದತ್ತಿಗಳಿವೆ. ಸಂಡೂರಿನ ಪರಿಸರದಲ್ಲಿ ಕವಿಗೋಷ್ಠಿ ಎಂಬ ವಿನೂತನ ಕಾರ್ಯಕ್ರಮ ಆಯೋಜನೆ ಮಾಡಬೇಕು. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಂಡೂರಿನಲ್ಲಿ ಆಯೋಜಿಸುವ ಉದ್ದೇಶವಿದೆ ಎಂದರು.
ಕಸಾಪ ತಾಲೂಕಾಧ್ಯಕ್ಷ ಡಾ.ಬಿ.ನಾಗನಗೌಡ ಮಾತನಾಡಿ, ನವೆಂಬರ್ ಕನ್ನಡ ಮಾಸಾಚರಣೆಗೆ ಸೀಮಿತವಾಗಬಾರದು. ಹೋಬಳಿಗಳ ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಲ್ಲಿ ಸಾಹಿತ್ಯ ಕಾರ್ಯಕ್ರಮ ನಡೆಸಬೇಕು ಎಂದು ಹೋಬಳಿ ಘಟಕಗಳ ಅಧ್ಯಕ್ಷರಿಗೆ ಸೂಚಿಸಿದರು.
ಕಸಾಪ ತಾಲೂಕು ಘಟಕದ ಮಾಜಿ ಅಧ್ಯಕ್ಷರಾದ ಬಸವರಾಜ ಮಸೂತಿ, ಸಿ.ಎಂ.ಸಿಗ್ಗಾಂವಿ, ಬಿಕೆಜಿ ಕಂಪನಿ ಎಚ್‌ಆರ್ ವಿಭಾಗದ ರಾಜಶೇಖರ್ ಬೆಲ್ಲದ್, ಚೋರನೂರು ಹೋಬಳಿ ಘಟಕದ ಅಧ್ಯಕ್ಷ ಹುಲ್ಲೇಶಿ, ಕಸಾಪ ಪದಾಧಿಕಾರಿಗಳಾದ ಎಸ್.ಡಿ.ಪ್ರೇಮಲೀಲಾ, ಐಕಲ್ ಸಾವಿತ್ರಮ್ಮ, ಶಶಿಕಲಾ ಚಂದ್ರಶೇಖರಪ್ಪ, ಸೋವೇನಹಳ್ಳಿ ಶಿವಮೂರ್ತಿಸ್ವಾಮಿ, ಪುರುಷೋತ್ತಮ, ಎಚ್.ಎನ್.ಬೊಂಸ್ಲೆ, ವೀರೇಶ್ ಗಾಣಿಗ ಇತರರಿದ್ದರು.