ಸಂಜೀವಿನಿಯಲ್ಲಿ ಶ್ರೀಗಂಧ ಮರಗಳವು ಅವ್ಯಾಹತ

4 Dwd 5A
Published on

ಧಾರವಾಡ: ಅವಳಿನಗರ ನಡುವಿನ ಸಂಜೀವಿನಿ ಪಾರ್ಕ್​ನಲ್ಲಿರುವ ಶ್ರೀಗಂಧ ಮರಗಳ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ಅರಣ್ಯ ಇಲಾಖೆ ಅಧೀನದ ಸಂಜೀವಿನಿ ಪಾರ್ಕ್​ಗೆ ಸುತ್ತಲೂ ತಂತಿಬೇಲಿ ಇದ್ದರೂ ಮರಗಳವು ಅವ್ಯಾಹತವಾಗಿ ನಡೆಯುತ್ತಿದೆ.

ಹುಬ್ಬಳ್ಳಿ- ಧಾರವಾಡ ಮುಖ್ಯರಸ್ತೆಗೆ ಹೊಂದಿಕೊಂಡೇ ರಾಯಾಪುರ ಬಳಿ ಸಂಜೀವಿನಿ ಪಾರ್ಕ್ ಇದೆ. ನಿತ್ಯ ಹಗಲಿರುಳು ಜನ ಹಾಗೂ ವಾಹನ ಸಂಚಾರ ಇರುವ ಪ್ರದೇಶ ಇದಾಗಿದೆ. ಆದಾಗ್ಯೂ ಬೆಳೆದು ನಿಂತ ಹತ್ತಾರು ಶ್ರೀಗಂಧದ ಮರಗಳು ಕಳ್ಳರ ಪಾಲಾಗಿವೆ. ಪಾರ್ಕ್ ಸುತ್ತ ಹಗಲಿರುಳು ಸಾಕಷ್ಟು ಭದ್ರತೆ ಹಾಗೂ ಸಿಸಿ ಕ್ಯಾಮರಾ ವ್ಯವಸ್ಥೆ ಇದ್ದರೂ ಆಗಾಗ ಶ್ರೀಗಂಧ ಮರಗಳ್ಳತನ ನಡೆಯುತ್ತಲೇ ಇದೆ. ಇದನ್ನು ಗಂಭೀರವಾಗಿ ಪರಿಗಣಿಸದ ಅರಣ್ಯಾಧಿಕಾರಿಗಳು, ಸಿಬ್ಬಂದಿ ಕೊರತೆ ನೆಪ ಹೇಳುತ್ತ ಕಾಲ ಕಳೆಯುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿಯೊಬ್ಬರು ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ. ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net