ಸಂಜೀವಿನಿ ಒಕ್ಕೂಟದಿಂದ ಮಹಿಳೆಯರ ಅಭಿವೃದ್ಧಿ

KDR okkuta
ಜಿಗಣೇಹಳ್ಳಿಯಲ್ಲಿ ಸಂಜೀವಿನ ಗ್ರಾಪಂ ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆಯನ್ನು ಕಡೂರಹಳ್ಳಿ ಪಿಎಸಿಎಸ್ ಮಾಜಿ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಉದ್ಘಾಟಿಸಿದರು. ಚಂದ್ರಮ್ಮ, ನಂದಕುಮಾರ್, ಆದಿನಾಥ್, ಕಾಂತಮ್ಮ, ಲಕ್ಷ್ಮಮ್ಮ, ರಮ್ಯಾ, ಸ್ವಾತಿ ಇದ್ದರು.
Published on

ಕಡೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರದಿಂದ ಗ್ರಾಮೀಣ ಭಾಗದ ಸಂಜೀವಿನಿ ಒಕ್ಕೂಟಗಳ ಸಂಘಗಳು ಮಹಿಳೆಯರ ಆರ್ಥಿಕ ಬಲವರ್ಧನೆಗೆ ಸಹಕಾರಿಯಾಗಿವೆ ಎಂದು ಕಡೂರಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ತಿಳಿಸಿದರು.

ಜಿಗಣೇಹಳ್ಳಿಯಲ್ಲಿ ಮಂಗಳವಾರ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ಸಂಜೀವಿನ ಗ್ರಾಪಂ ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸಹಕಾರ ಸಂಘಗಳು ಹೆಚ್ಚು ವರದಾನವಾಗಿವೆ. ಸಂಘಗಳ ಮೂಲಕವೇ ಬದುಕು ನಡೆಸುವ ಸಾಕಷ್ಟು ಮಹಿಳೆಯರು ಆರ್ಥಿಕ ಪುನಶ್ಚೇತನಗೊಳಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಶೇ.60 ಮತ್ತು ರಾಜ್ಯ ಸರ್ಕಾರ ಶೇ.40 ಸಾಲ ಸೌಲಭ್ಯ ಒದಗಿಸಿಕೊಡುತ್ತದೆ. ಸಂಘಗಳ ಒಕ್ಕೂಟದಿಂದ ಗ್ರಾಮೀಣ ಭಾಗದ ಮಹಿಳೆಯರಿಗೆ ಆರ್ಥಿಕ ನೆರವು, ತರಬೇತಿ, ಕಿರುಉದ್ಯಮದ ಪರಿಣಾಮದಿಂದ ಸಂಘಗಳ ಪ್ರಗತಿಗೆ ಸಾಧ್ಯವಾಗಿಸಿಕೊಂಡು ಲಾಭದತ್ತ ಸಾಗುತ್ತಿವೆ ಎಂದರು.

ಒಕ್ಕೂಟದ ಅಧ್ಯಕ್ಷೆ ಚಂದ್ರಮ್ಮ, ತಾಲೂಕು ಸಂಯೋಜಕ ನಂದಕುಮಾರ್, ಪಿಡಿಒ ಆದಿನಾಥ್, ಗ್ರಾಪಂ ಸದಸ್ಯರಾದ ಕಾಂತಮ್ಮ, ಲಕ್ಷ್ಮಮ್ಮ, ರಮ್ಯಾ, ಸ್ವಾತಿ, ಗ್ರಾಪಂ ವ್ಯಾಪ್ತಿಯ ಏಳು ಹಳ್ಳಿಗಳ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net