ಸಂಜೀವಿನಿ ಒಕ್ಕೂಟಕ್ಕೆ ಸೇರ್ಪಡೆಗೊಳ್ಳಿ

bhr okkuta
ಬಾಳೆಹೊನ್ನೂರಿನಲ್ಲಿ ಬಿ.ಕಣಬೂರು ಗ್ರಾಮದ ಸಂಜೀವಿನಿ ಗ್ರಾಮ ಒಕ್ಕೂಟದ ವಾರ್ಷಿಕ ಮಹಾ ಸಭೆಯನ್ನು ಒಕ್ಕೂಟದ ಅಧ್ಯಕ್ಷೆ ವಿಶಾಲ ಆರ್. ಶೆಟ್ಟಿ ಉದ್ಘಾಟಿಸಿದರು. ರಾಜೇಂದ್ರ, ಸುಬ್ರಹ್ಮಣ್ಯ, ರವಿಚಂದ್ರ, ಶಾಹಿದಾ ಬಾನು, ಥೆರೇಸಾ, ಪ್ರೇಮಲತಾ, ಪಿ.ಪಿ.ಬೇಬಿ, ಕಾಶಪ್ಪ ಇತರರಿದ್ದರು.
Published on

ಬಾಳೆಹೊನ್ನೂರು: ಎನ್‌ಆರ್‌ಎಲ್‌ಎಂ ಒಕ್ಕೂಟದ ಸ್ವಸಹಾಯ ಸಂಘಗಳಿಂದ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಒಕ್ಕೂಟದ ಜಿಲ್ಲಾ ವ್ಯವಸ್ಥಾಪಕ ರಾಜೇಂದ್ರ ಹೇಳಿದರು.

ಬಿ.ಕಣಬೂರು ಗ್ರಾಮದ ಸಂಜೀವಿನಿ ಗ್ರಾಮ ಒಕ್ಕೂಟ ಶನಿವಾರ ಆಯೋಜಿಸಿದ್ದ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿ,

ಸಂಜೀವಿನಿ ಒಕ್ಕೂಟ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರ್ಹ ಮಹಿಳೆಯರನ್ನು ಸ್ವಸಹಾಯ ಸಂಘಗಳಿಗೆ ಸೇರ್ಪಡೆಗೊಳಿಸಿ ಹೆಚ್ಚು ಸ್ವ ಸಹಾಯ ಸಂಘಗಳ ರಚನೆ ಮಾಡುವ ಉದ್ದೇಶ ಹೊಂದಿದೆ ಎಂದರು.

ಎನ್‌ಆರ್‌ಎಲ್‌ಎಂ ಯೋಜನೆಯಲ್ಲಿ ಹಲವು ಅನುದಾನಗಳು ಲಭ್ಯವಿದ್ದು, ಒಕ್ಕೂಟದಿಂದ ದೊರೆಯುವ ಸಾಲ ಸೌಲಭ್ಯ, ಅನುದಾನಗಳನ್ನು ಸ್ವ ಸಹಾಯ ಸಂಘದ ಮಹಿಳೆಯರು ಹೆಚ್ಚಿನದಾಗಿ ಉಪಯೋಗಿಸಿಕೊಳ್ಳಬೇಕು ಎಂದರು.

ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಸುಬ್ರಹ್ಮಣ್ಯ ಮಾತನಾಡಿ, ಒಕ್ಕೂಟವು ಪ್ರತಿ ಆರ್ಥಿಕ ವರ್ಷದ ಆಂತರಿಕ ಮತ್ತು ಶಾಸನಬದ್ಧ ಲೆಕ್ಕ ಪರಿಶೋಧನೆ ಮಾಡಿಸಿ ವಾರ್ಷಿಕ ಮಹಾಸಭೆ ಆಯೋಜನೆ ಮಾಡಲಾಗುತ್ತದೆ. ಸಭೆಯಲ್ಲಿ ವಾರ್ಷಿಕ ಆದಾಯ ವೆಚ್ಚಗಳ ಬಗ್ಗೆ ಚರ್ಚಿಸಿ ಅನುಮೋದನೆ ಪಡೆಯಲಾಗುತ್ತದೆ ಎಂದರು.

ಗ್ರಾಮ ಒಕ್ಕೂಟದ ಅಧ್ಯಕ್ಷೆ ವಿಶಾಲಾ ಆರ್. ಶೆಟ್ಟಿ ಮಾತನಾಡಿ, ಒಕ್ಕೂಟದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಸ್ವಸಹಾಯ ಸಂಘದ ಮಹಿಳೆಯರು ಸದುಪಯೋಗಪಡಿಸಿಕೊಳ್ಳಬೇಕು. ಯೋಜನೆಯಲ್ಲಿ ಸಂಜೀವಿನಿ ಶೆಡ್ ನಿರ್ಮಾಣ, ಅಕ್ಕ ಕೆೆ ನಿರ್ಮಾಣ, ಸಂಘದ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಸಂಜೀವಿನಿಯಿಂದ ಉತ್ತಮ ಪ್ರೋತ್ಸಾಹ ದೊರೆಯುತ್ತದೆ ಎಂದರು.

ಗ್ರಾಪಂ ಅಧ್ಯಕ್ಷ ರವಿಚಂದ್ರ ಮಾತನಾಡಿ, ಬಿ.ಕಣಬೂರು ಸಂಜೀವಿನಿ ಒಕ್ಕೂಟಕ್ಕೆ ಸಂಜೀವಿನಿ ಶೆಡ್ ನಿರ್ಮಾಣ ಮತ್ತು ಅಕ್ಕ ಕೆೆ ನಿರ್ಮಾಣಕ್ಕೆ ಸೂಕ್ತ ಸ್ಥಳಾವಕಾಶವನ್ನು ಗ್ರಾಮ ಪಂಚಾಯಿತಿಯಿಂದ ಶೀಘ್ರದಲ್ಲಿ ಮಾಡಿಕೊಡಲಾಗುವುದು. ಸ್ವಸಹಾಯ ಸಂಘದ ಮಹಿಳೆಯರು ಗ್ರಾಮ ಪಂಚಾಯತಿಯಲ್ಲಿ ನಡೆಯುವ ಗ್ರಾಮ ಸಭೆ, ಮಹಿಳಾ ಗ್ರಾಮ ಸಭೆ, ವಿಶೇಷ ಸಭೆಯಲ್ಲಿ ಭಾಗವಹಿಸಬೇಕು. ಆ ಮೂಲಕ ಎನ್‌ಆರ್‌ಎಲ್‌ಎಂ ಯೋಜನೆಯ ಸೌಲಭ್ಯಗಳನ್ನು ಪಡೆಯಬೇಕು ಎಂದು ತಿಳಿಸಿದರು.

ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಶಾಹಿದಾ ಬಾನು, ಖಜಾಂಚಿ ಥೆರೇಸಾ ಜೋಯ್, ಉಪಾಧ್ಯಕ್ಷೆ ಪ್ರೇಮಲತಾ, ಜಂಟಿ ಕಾರ್ಯದರ್ಶಿ ಹೂವಮ್ಮ, ಕ್ಷೇತ್ರ ಆರೋಗ್ಯ ಅಧಿಕಾರಿ ಪಿ.ಪಿ.ಬೇಬಿ, ಎನ್‌ಆರ್‌ಎಲ್‌ಎಂ ತಾಲೂಕು ಸಿಬ್ಬಂದಿ ಗಿರೀಶ್, ಶೈನಿ, ಪಿಡಿಒ ಕಾಶಪ್ಪ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷೆ ಚಂದ್ರಮ್ಮ, ವಿದ್ಯಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಕೆ.ಎಸ್.ಚನ್ನಗಿರಿ, ಒಕ್ಕೂಟದ ಸಿಬ್ಬಂದಿ ಮಮತಾ, ಕವಿತಾ, ಶಿವಮ್ಮ, ಸರಸ್ವತಿ, ಜಯಶ್ರೀ, ಜಯಂತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net