ಸಂಜೀವರಾಯ ಸ್ವಾಮಿ ರಥೋತ್ಸವ ಅದ್ದೂರಿ

16mnv01
Published on

ಮಾನ್ವಿ: ಪಟ್ಟಣದ ಚೀಕಲಪರ್ವಿ ಮಾರ್ಗದಲ್ಲಿರುವ ಸಂಜೀವರಾಯಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಸಂಜೆ ಮಹಾ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

ಬೆಳಗ್ಗೆ ವ್ಯಾಸರಾಜರಿಂದ ಪ್ರತಿಷ್ಠಾಪಿತ ಸಂಜೀವರಾಯಸ್ವಾಮಿ ಮೂರ್ತಿಗೆ ಅಭಿಷೇಕ, ಅರ್ಚನೆ ಮಹಾಮಂಗಳಾರತಿ, ಹೂವಿನ ಅಲಂಕಾರ ಮಾಡಲಾಯಿತು. ಸಂಜೆ ದೇವಸ್ಥಾನದ ಆವರಣದಲ್ಲಿ ಸಂಜೀವರಾಯಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ನಡೆಸಲಾಯಿತು. ಡೊಳ್ಳು ಕುಣಿತ ಹಾಗೂ ಜನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ಅರ್ಚಕ ವಿಜಯೀಂದ್ರಾಚಾರ್ಯ ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net