ಸಂಚಾರಿ ಮಣ್ಣು ಪರೀಕ್ಷಾ ಕೇಂದ್ರ

Chitradurga murugha math
Published on

ಚಿತ್ರದುರ್ಗ: ರಾಜ್ಯದ ಪ್ರತಿ ರೈತರಿಗೆ ಐಡೆಂಟಿಟಿ ಕಾರ್ಡ್, ಪ್ರತಿ ರೈತ ಸಂಪರ್ಕಕ್ಕೆ ಸಂಚಾರಿ ಮಣ್ಣು ಪರೀಕ್ಷಾ ಕೇಂದ್ರ, ರಾಜ್ಯದ ನದಿ ನೀರು ಸದ್ಬಳಕೆಗೆ ಶೀಘ್ರದಲ್ಲೇ ರೈತರ ಸಭೆ ನಡೆಸುವುದಾಗಿ ಕೃಷಿ ಬಿ.ಸಿ.ಪಾಟೀಲ್ ಭರವಸೆ ನೀಡಿದರು.
ಮುರುಘಾ ಮಠದಲ್ಲಿ ಶನಿವಾರ ಆಯೋಜಿಸಿದ್ದ ಕೃಷಿ, ಕೈಗಾರಿಕೆ ಮೇಳ, ಜೋಡೆತ್ತು, ಸಾಕು ಪ್ರಾಣಿಗಳ ಪ್ರದರ್ಶನ ಹಾಗೂ ಬಯಲು ಸೀಮೆ ನೀರಾವರಿ ಯೋಜನೆ ಮತ್ತು ಅನುಷ್ಠಾನ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಪ್ರತಿ ರೈತರಿಗೆ ವಿತರಿಸುವ ಗುರುತು ಪತ್ರವನ್ನು ರೈತ ಸಂಪರ್ಕ ಕೇಂದ್ರದಲ್ಲಿ ಸ್ವೈಪ್ ಮಾಡಿದರೆ ರೈತನ ಹೆಸರು, ಜಮೀನು ಮೊದಲಾದ ವಿವರಗಳು ದೊರೆಯಲಿವೆ ಎಂದರು.
ಉತ್ಸವ ಸಮಿತಿ ಗೌರವಾಧ್ಯಕ್ಷ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕಾರ್ಯಾಧ್ಯಕ್ಷ ಎನ್.ಜಯಣ್ಣ, ಇಳಕಲ್‌ನ ಶ್ರೀ ಗುರು ಮಹಾಂತ ಸ್ವಾಮೀಜಿ, ರೈತ ಮುಖಂಡರಾದ ಈಚಘಟ್ಟದ ಸಿದ್ದವೀರಪ್ಪ, ಕೆ.ಪಿ.ಭೂತಯ್ಯ ರೆಡ್ಡಿಹಳ್ಳಿ ವೀರಣ್ಣ, ಹೊರಕೇರಪ್ಪ, ನುಲೇನೂರು ಟಿ.ಶಂಕರಪ್ಪ, ರಾಜ್ಯ ಬಿಜೆಪಿ ಕಾರ್ಯದರ್ಶಿ ಕೆ.ಎಸ್.ನವೀನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net