ಸಂಚಾರಿ ಪೊಲೀಸರ ದರ‍್ಜನ್ಯ ತಡೆಯಿರಿ

2503KLB04
Published on

ಕಲಬುರಗಿ: ನಗರದಲ್ಲಿ ಸಂಚಾರಿ ಪೊಲೀಸ್​ ಠಾಣೆಯ ಸಿಬ್ಬಂದಿ ಆಟೋ ಚಾಲಕರಿಗೆ ಬೇಕಾಬಿಟ್ಟಿಯಾಗಿ ಹೆಚ್ಚಿನ ದಂಡ ವಿಧಿಸುತ್ತಿದ್ದು, ಅದನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿ ಕಲ್ಯಾಣ ನಾಡು ವಿಕಾಸ ವೇದಿಕೆಯ ಆಟೋ ಚಾಲಕರ ಟಕದಿಂದ ಮಂಗಳವಾರ ಬೃಹತ್​ ಪ್ರತಿಭಟನೆ ನಡೆಸಲಾಯಿತು.

ನಗರದ ಕೇಂದ್ರ ಬಸ್​ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನೂರಾರು ಆಟೋ ಚಾಲಕರು ಪ್ರತಿಭಟನಾ ಮೆರವಣಿಗೆ ನಡೆಸಿ, ಪೊಲೀಸರ ನಡೆ ವಿರುದ್ಧ ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿ, ಧಿಕ್ಕಾರ ಕೂಗಿದರು.

ನಗರದ ವ್ಯಾಪ್ತಿಯಲ್ಲಿ ಎಲ್ಲಿಯೇ ಆಟೋ ನಿಂತರೂ ನೋ ಪರ‍್ಕಿಂಗ್​ ಎಂದು ೋಟೋ ಕ್ಲಿಕ್ಕಿಸಿ ಇ ಚಲನ್​ ದಂಡ ವಿಧಿಸುತ್ತಿದ್ದಾರೆ. ನಗರದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರವಾಗಿದ್ದು, ಆಟೋ ನಡೆಸಿ ಜೀವನ ನಡೆಸುತ್ತಿರುವ ಚಾಲಕರಿಗೆ ಸಿಕ್ಕಾಪಟ್ಟೆ ದಂಡ ವಿಧಿಸಿ, ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಇದರಿಂದ ಆಟೋ ಚಾಲಕರು ಮಾನಸಿಕವಾಗಿ ಕುಗ್ಗಿದ್ದು, ಜೀವನ ನಡೆಸುವುದು ಕಷ್ಟಕರವಾಗಿದೆ. ಆದ್ದರಿಂದ ರ‍್ಕಾರ ದಂಡದ ಮೊತ್ತವನ್ನು ಕಡಿಮೆ ಮಾಡಬೇಕು. ಸಂಚಾರಿ ಪೊಲೀಸರ ದರ‍್ಜನ್ಯ ತಡೆಯಬೇಕು. ತಾಲೂಕುಗಳ ರ‍್ಮಿಟ್​ ಇರುವ ವಾಹನಗಳು ನಗರದಲ್ಲಿ ಓಡಾಡುತ್ತಿದ್ದು, ಅವರಿಗೆ ದಂಡ ವಿಧಿಸುತ್ತಿಲ್ಲ. ನಗರದ ವ್ಯಾಪ್ತಿಯ ರ‍್ಮಿಟ್​ ಇರುವ ವಾಹನ ಚಾಲಕರಿಗೆ ತೊಂದರೆ ಆಗುತ್ತಿದೆ ಎಂದು ಅಳಲು ತೋಡಿಕೊಂಡರು. ಕೇಂದ್ರ ಬಸ್​ ನಿಲ್ದಾಣದಲ್ಲಿ ಆಟೋ ಚಾಲಕರಿಗೆ ಇರುವ ನಿಲ್ದಾಣ ಪುನ@ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.

ವೇದಿಕೆ ಸಂಸ್ಥಾಪಕ ಅಧ್ಯ ಮುತ್ತಣ್ಣ ಎಸ್​.ನಡಗೇರಿ, ಜಿಲ್ಲಾಧ್ಯ ಬಾಬು ಮದನಕರ, ದತ್ತು ಜಮಾದಾರ, ಜೈಭೀಮ ಮಾಳಗೆ, ಅವಿನಾಶ ಕಪನೂರ, ಮೋಹನ ಸಾಗರ, ಅರುಣ ತಾವಡೆ, ಅವಿನಾಶ ಕಪನೂರ, ಪ್ರವಿಣ ಖೇಮನ್​, ಮಲ್ಲು ದೋರೆ, ಅರುಣ ವಾಲಿಕಾರ, ಝಾಕೀರ ಪಟೇಲ್​, ಶಿವು ಪೂಜಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net