ಸಂಚಾರಿ ಪೀಠಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಿ

14 Jaggu 3
ಬೆಳಗಾವಿಗೆ ಮಂಜೂರಾಗಿರುವ ರಾಜ್ಯ ಗ್ರಾಹಕರ ವಾಜ್ಯಗಳ ಪರಿಹಾರ ಆಯೋಗದ ಕಾಯಂ ಸಂಚಾರಿ ಪೀಠ ಕಾರ್ಯಾರಂಭಕ್ಕೆ ಒತ್ತಾಯಿಸಿ ಜಿಲ್ಲಾ ಗ್ರಾಹಕರ ಸಂಘ ಮತ್ತು ಬೆಳಗಾವಿ ಬಾರ್ ಅಸೋಸಿಯೇಶನ್‌ನಿಂದ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು. ಗಜಾನನ ಪಾಟೀಲ, ಆರ್.ಸಿ. ಪಾಟೀಲ ಇತರರು ಇದ್ದರು.
Published on

ಬೆಳಗಾವಿ: ಬೆಳಗಾವಿಗೆ ರಾಜ್ಯ ಗ್ರಾಹಕರ ವಾಜ್ಯಗಳ ಪರಿಹಾರ ಆಯೋಗದ ಕಾಯಂ ಸಂಚಾರಿ ಪೀಠ ಕಳೆದ ವರ್ಷ ಮಂಜೂರಾಗಿದ್ದು, ಅಗತ್ಯ ಸ್ಥಳ ಹಾಗೂ ಪಿಠೋಪಕರಣಗಳ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಬೆಳಗಾವಿ ಜಿಲ್ಲಾ ಗ್ರಾಹಕರ ಸಂಘ ಮತ್ತು ಬೆಳಗಾವಿ ಬಾರ್ ಅಸೋಸಿಯೇಷನ್ (ವಕೀಲರ ಸಂಘ)ನಿಂದ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ ಅವರಿಗೆ ಬೆಳಗಾವಿ ಕಚೇರಿಯಲ್ಲಿ ಬುಧವಾರ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಕೇಂದ್ರಕ್ಕೆ ಆಯೋಗದ ಕಾಯಂ ಸಂಚಾರಿ ಪೀಠ ಮಂಜೂರಾಗಿರುವುದರಿಂದ ಉತ್ತರ ಕರ್ನಾಟಕಕ್ಕೆ ಅನುಕೂಲವಾಗಲಿದೆ ಜಿಲ್ಲಾ ನ್ಯಾಯಾಲಯದಲ್ಲಿ ಪೀಠ ಕಾರ್ಯಾರಂಭ ಮಾಡಿಸುವುದಕ್ಕೆ ಕ್ರಮ ಕೈಗೊಳ್ಳಬೇಕು. ಸದ್ಯ ತಾತ್ಕಾಲಿಕವಾಗಿ ಸ್ಥಳ ನಿಗದಿ ಮಾಡಿ, ಅಗತ್ಯ ಸಾಮಗ್ರಿ ಒದಗಿಸುವಂತೆ ಮನವಿ ಮಾಡಿದರು. ವಕೀಲರ ಸಂಘದ ಉಪಾಧ್ಯಕ್ಷ ಗಜಾನನ ಕೆ. ಪಾಟೀಲ, ಕಾರ್ಯದರ್ಶಿ ಆರ್.ಸಿ. ಪಾಟೀಲ, ಜಿಲ್ಲಾ ಗ್ರಾಹಕ ಸಂಘದ ಅಧ್ಯಕ್ಷ, ವಕೀಲ ಎನ್.ಆರ್.ಲಾತೂರ, ಉಪಾಧ್ಯಕ್ಷ ಜಿ.ಎ.ಹಿರೇಮಠ, ಚಂದ್ರಕಾಂತ ಮಜಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net