

ಔರಾದ್: ಸವಾರರು ವಾಹನ ಸಂಚಾರಕ್ಕೆ ಬರುವ ಮುನ್ನ ದಾಖಲೆ ಜತೆಗೆ ಇಟ್ಟುಕೊಂಡು, ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಸಂತಪುರ ಪೊಲೀಸ್ ಠಾಣೆ ಪಿಎಸ್‌ಐ ಮೆಹೆಬೂಬ್ ಅಲಿ ಹೇಳಿದರು.
ವಡಗಾಂವ(ದೇ) ದೇಶಮುಖ ಗಡಿಯಲ್ಲಿ ಸಹರಾ ಯೂಥ್ ಗಣೇಶ ಮಂಡಳಿಯಿAದ ಗುರುವಾರ ಏರ್ಪಡಿಸಿದ್ದ ಸನ್ಮಾನ ಹಾಗೂ ರಸಮಂಜರಿ ಕಾರ್ಯಕ್ರಮದಲ್ಲಿ ಸಂಚಾರ ಜಾಗೃತಿ ಕುರಿತು ಮಾತನಾಡಿ, ಹೆಲ್ಮೆಟ್ ಧರಿಸದ ಕಾರಣಕ್ಕೆ ನಿತ್ಯ ಹಲವು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಎಚ್ಚರಿಕೆ ವಹಿಸಿ ಪ್ರಾಣಾಪಾಯದಿಂದ ಪಾರಾಗಬೇಕು ಎಂದರು.
ಕೆಎಎಸ್ ಅಧಿಕಾರಿ ಖಾಜಾ ಖಲಿಲುಲ್ಲಾ ಮಾತನಾಡಿ, ಸತತ ೧೧ ವರ್ಷದಿಂದ ಗ್ರಾಮದ ಎಲ್ಲ ಸಮಾಜಮುಖಿ ಮನಸ್ಸುಗಳ ಮೂಲಕ ಪ್ರತಿವರ್ಷ ಗಣೇಶೋತ್ಸವದಲ್ಲಿ ಸಾಧಕರನ್ನು ಸನ್ಮಾನಿಸಲಾಗುತ್ತಿದೆ. ಎಲ್ಲರೂ ಕೈ ಜೋಡಿಸುತ್ತಿರುವುದು ಗ್ರಾಮಾಭಿವೃದ್ಧಿಗೆ ಸಹಕಾರಿ ಎಂದರು.
ಪಿಡಿಒ ಸುಭಾಷ ಭುಯ್ಯ, ಪಶು ವೈದ್ಯಾಧಿಕಾರಿ ಡಾ.ಸೂರ್ಯಕಾಂತ ಬಿರಾದಾರ ಮಾತನಾಡಿದರು.
ಇಸ್ರೋದಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಮದ ಪ್ರಭುಗೊಂಡಾ, ಸುಧಾಕರ್, ಎಂಬಿಬಿಎಸ್ ಅರ್ಹತೆ ಪಡೆದ ಖದೀರ್ ಸೇರಿದಂತೆ ಗ್ರಾಮದ ೧೦೦ಕ್ಕೂ ಹೆಚ್ಚು ಸಾಧಕರನ್ನು ಸನ್ಮಾನಿಸಲಾಯಿತು.
ಪ್ರಮುಖರಾದ ಮಲ್ಲಿಕಾರ್ಜುನ ಕೇಸರಿ, ಮಹೇಶ, ಸೂರ್ಯಕಾಂತ ದೇಶಮುಖ, ಹಣಮಂತ ನೇಳಗೆ, ಓಂಕಾರ, ಭಜನಲಾಲ್, ಸಿದ್ದಯ್ಯ ಸ್ವಾಮಿ ಇತರರಿದ್ದರು. ರತಿಕಾಂತ ನೇಳಗೆ ವಂದಿಸಿದರು. ನವೀಲಕುಮಾರ ಉತ್ಕಾರ ಸ್ವಾಗತಿಸಿದರು. ಬಸವ ಚಿಕ್ಕನಿಂಗೆ ನಿರೂಪಣೆ ಮಾಡಿದರು.