

ಕಲಬುರಗಿ: ಬಿಸಿಲ ಬೇಗೆ ಹೆಚ್ಚಾಗಿದ್ದು, ಬಿಸಿಲಲ್ಲಿ ನಿಂತ್ತು ಕೆಲಸ ಮಾಡುವ ಸಂಚಾರ ಪೊಲೀಸ್ ಸಿಬ್ಬಂದಿಗೆ ಅನುಕೂಲವಾಗುವಂತೆ ರಾಜ್ಯದಲ್ಲಿ ಪ್ರಥಮ ಬಾರಿಗೆ ಪ್ರಾಯೋಗಿಕವಾಗಿ ಹವಾ ನಿಯಂತ್ರಿತ (ಎಸಿ) ಹೆಲ್ಮೆಟ್ ವಿತರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ಹೇಳಿದರು.
ಪ್ರತಿ ರ‍್ಷ ಬೇಸಿಗೆಯ ಮೂರು ತಿಂಗಳಲ್ಲಿ ಜಿಲ್ಲೆಯಲ್ಲಿ ೪೨ ರಿಂದ ೪೫ ಡಿಗ್ರಿವರೆಗೆ ಉಷ್ಣಾಂಶ ಕಂಡು ಬರುತ್ತಿದೆ. ಭೀಕರ ಬಿಸಿಲಿನಲ್ಲಿ ಸಂಚಾರ ನಿಯಂತ್ರಣ ಮಾಡಲು ಸಿಗ್ನಲ್ ಸೇರಿ ನಗರದಾದ್ಯಂತ ಸಂಚಾರ ಠಾಣೆ ಸಿಬ್ಬಂದಿ ಬಿಸಿಲಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ಅನುಕೂಲ ಕಲ್ಪಿಸಲು ೧೦ ಸಿಬ್ಬಂದಿಗೆ ಎಸಿ ಹೆಲ್ಮೇಟ್ ನೀಡಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಚಾರ ಪೊಲೀಸ್ ಸಿಬ್ಬಂದಿಗೆ ೧೦ ಎಸಿ ಹೆಲ್ಮೇಟ್, ೧೦ ಪೊಲ್ಯುಷನ್ ಕಂಟ್ರೊಲ್ ಮಾಸ್ಕ್, ರಾತ್ರಿಯಲ್ಲಿ ಹೊಳೆಯುವ ೧೪೦ ಜಾಕೆಟ್, ಲೈಟಿನ ೧೫೦ ಬ್ಯಾಟನ್ (ರಾತ್ರಿ ವೇಳೆ ರ‍್ತವ್ಯಕ್ಕೆ ಸಹಕಾರಿ)ಗಳನ್ನು ವಿತರಿಸಲಾಗಿದೆ. ಮೊದಲ ಬಾರಿಗೆ ಪ್ರಾಯೋಗಿಕವಾಗಿ ಜಿಲ್ಲೆಯಲ್ಲಿ ಜಾರಿ ಮಾಡಿದ್ದು, ಸಿಬ್ಬಂದಿ ಪ್ರತಿಕ್ರಿಯೆ ಆಧರಿಸಿ ಹೆಚ್ಚಿನ ಎಸಿ ಹೆಲ್ಮೇಟ್ ಸೇರಿ ಇತರ ಉಪಕರಣ ಖರೀದಿಸಲಾಗುವುದು ಎಂದರು.
ಬಿಸಿಲಿನಲ್ಲಿ ಸಿಗ್ನಲ್ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಕುಡಿಯುವ ನೀರು, ಮಜ್ಜಿಗೆ ಹಾಗೂ ಜ್ಯೂಸ್ ವಿತರಣೆಯ ವ್ಯವಸ್ಥೆ ಮಾಡಲಾಗಿದೆ. ಬಿಸಿಲಿನ ವೇಳೆ ಬೆಳಗ್ಗೆ ೧೧ರಿಂದ ಸಂಜೆ ೫ರ ವರೆಗೆ ಎಸಿ ಹೆಲ್ಮೇಟ್ ಬಳಸಬಹುದಾಗಿದೆ. ಒಟ್ಟಾರೆಯಾಗಿ ಸಿಬ್ಬಂದಿ ಆರೋಗ್ಯದ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಸಾಂಕೇತಿಕವಾಗಿ ಸಂಚಾರ ಠಾಣೆ ಪಿಐಗಳಾದ ಮಹಾಂತೇಶ ಪಾಟೀಲ್ಗೆ ಹೆಲ್ಮೆಟ್ ಕಿಟ್ ವಿತರಿಸಲಾಯಿತು. ಡಿಸಿಪಿಗಳಾದ ಕನ್ನಿಕಾ ಸಿಕ್ರಿವಾಲಾ, ಪ್ರವಿಣ ನಾಯಕ ಸೇರಿ ಎಲ್ಲ ಠಾಣೆಯ ಪಿಐಗಳು, ಪಿಎಸ್ಐ, ಎಎಸ್ಐ ಇದ್ದರು.