

ಚಿತ್ರದುರ್ಗ: ವೇದಾಂತಗಣಿ ಗುತ್ತಿಗೆ ಕಂಪನಿಯಿಂದ ಗೇಟ್ ನಂ.3ರ ಮುಖಾಂತರ ಅದಿರು ಸಾಗಿಸುತ್ತಿದ್ದ ಲಾರಿಗಳ ಸಂಚಾರ ಸ್ಥಗಿತಗೊಳಿಸಿರುವು ದನ್ನು ವಿರೋಧಿಸಿ ಚಿತ್ರದುರ್ಗ ಅದಿರು ಮತ್ತು ಸರಕು ಸಾಗಾಣೆ ಲಾರಿ ಮಾಲೀಕರು,ಚಾಲಕರು ಹಾಗೂ ಕ್ಲೀನರ್‌ಗಳು ಗುರುವಾರ ನಗ ರದಲ್ಲಿ ಪ್ರತಿಭಟಿಸಿದರು.
ಜಿಲ್ಲಾವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಿಂದ ಅದಿರು ಸಾಗಿಸುತ್ತಿದ್ದ ಒಂದು ಸಾವಿರಕ್ಕೂ ಹೆಚ್ಚು ಲಾರಿಗಳ ಸಂಚಾರವನ್ನು ಸ್ಥಗಿತದ ಹಿಂ ದೆ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡಿವಿದೆ. ಅದಿರು ಸಾಗಾಟವನ್ನೇ ನಂಬಿರುವ,ಲಾರಿ ಮಾಲೀಕರು,ಚಾಲಕರು,ಕ್ಲೀನರ್,ಮೆಕ್ಯಾನಿಕ್‌ಗಳು, ಆ ಟೋಮೊಬೈಲ್,ಟೈರ್ ಉದ್ದಿಮೆದಾರರು,ಲೋಡಿಂಗ್,ಅನ್‌ಲೋಡಿಂಗ್ ಹಮಾಲರು ಮೊದಲಾದ 25 ಸಾವಿರಕ್ಕೂ ಹೆಚ್ಚು ಜನರ ಜೀವ ನ ಸಂಕಷ್ಟಕ್ಕೆ ಸಿಲುಕಿದೆ. ಲಾರಿ ಖರೀದಿ ಸಾಲ ಕಂತು,ತೆರಿಗೆ ಪಾವತಿಸಲು ಪರದಾಡುವಂತಾಗಿದ್ದು,ವಿಷ ಕುಡಿಯುವ ಪರಿಸ್ಥಿತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸರ್ವೆ ನಂ.ಐದು ಮತ್ತು ಆರರ ಬಿದಿರುಬೊಮ್ಮೇನಹಳ್ಳಿಯಲ್ಲಿ ಅರ್ಧ ಕಿ.ಮೀ.ದೂರದ ಲಾರಿಗಳ ಸಂಚಾರಕ್ಕೆ ವಿಧಿಸಿರುವ ಅರಣ್ಯ ಇಲಾಖೆ ನಿರ್ಬಂಧದ ಹಿಂದಿರುವ ಕೈವಾಡವನ್ನು ಬಯಲಿಗೆಳೆದು,ಅದಿರು ಸಾಗಾಣಿಕೆ ಲಾರಿಗಳಿಗೆ ಮುಕ್ತ ಅವಕಾಶ ಕಲ್ಪಿಸುವಂತೆ ಫೆಡ ರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿ.ನವೀನ್‌ರೆಡ್ಡಿ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅವರನ್ನು ಒತ್ತಾಯಿಸಿದರು. ಲಾರಿ ಮಾಲೀಕರ ಹಾಗೂ ಚಾಲಕರ ಮನವಿ ಆಲಿಸಿದ ಜಿಲ್ಲಾಧಿಕಾರಿ ವಾರದೊಳಗೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಅಸೋಸಿಯೇಷನ್ ಉಪಾಧ್ಯಕ್ಷ ಎನ್.ಶ್ರೀನಿವಾಸರಾವ್,ಚಿತ್ರದುರ್ಗ ಅದಿರು ಮತ್ತು ಸರಕು ಸಾಮಾಗ್ರಿಗಳ ಸಾಗಾಣಿಕೆ ಲಾರಿ ಮಾ ಲೀಕರ ಸಂಘದ ಅಧ್ಯಕ್ಷ ಎನ್.ಮನ್ಸೂರ್‌ಅಹಮದ್,ಉಪಾಧ್ಯಕ್ಷ ಸಿ.ರಮೇಶ್,ಕಾರ‌್ಯದರ್ಶಿ ಮಹಮದ್‌ಇಮ್ರಾನ್,ಖಜಾಂಚಿ ಎಚ್. ಕೊ ಟ್ರೇಶ್,ಮುಬೀನ್‌ಶರೀಫ್,ವಿಶ್ವನಾಥ್,ನಿಜಾಮುದ್ದಿನ್,ತಿಪ್ಪೇಸ್ವಾಮಿ,ಸೀನ ಮತ್ತಿತರರು ಇದ್ದರು.