ಸಂಚಾರ ನಿಯಮಗಳನ್ನು ಪಾಲಿಸಿ

3ark2
ಅರಕಲಗೂಡು ಅನಕೃ ವೃತ್ತದಲ್ಲಿ ಪೊಲೀಸರು ದ್ವಿಚಕ್ರ ವಾಹನಗಳ ತಪಾಸಣೆ ಕಾರ್ಯ ನಡೆಸಿದರು.
Published on

ಅರಕಲಗೂಡು: ಎಲ್ಲ ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸಬೇಕು. ಆಗ ಮಾತ್ರ ಅಪಘಾತಗಳನ್ನು ತಡೆಗಟ್ಟಲು ಸಾಧ್ಯ ಎಂದು ಸಿಪಿಐ ಎಸ್.ಎಂ. ರಘುಪತಿ ತಿಳಿಸಿದರು.

ಪಟ್ಟಣದ ಅನಕೃ ವೃತ್ತದಲ್ಲಿ ಶುಕ್ರವಾರ ದ್ವಿಚಕ್ರ ವಾಹನಗಳ ತಪಾಸಣೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿ, ಪಟ್ಟಣದಲ್ಲಿ ವಾಹನಗಳ ದಟ್ಟಣೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದು, ಸಾರ್ವಜನಿಕರು, ವಾಹನ ಸವಾರರು ಸಹಕರಿಸಬೇಕು ಎಂದರು. ತಾಲೂಕಿನಾದ್ಯಂತ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಇಲ್ಲವಾದರೆ 500 ರೂ. ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪಟ್ಟಣದ ಸಂತೆಮಾಳ, ಅನಕೃ ವೃತ್ತ, ಇಂದಿರಾ ಕ್ಯಾಂಟೀನ್ ಸಮೀಪದಲ್ಲಿ ನಿಯಮಾನುಸಾರ ವಾಹನಗಳ ನಿಲುಗಡೆ ಮಾಡಬೇಕು. ಅಲ್ಲದೆ ರಸ್ತೆ ಬದಿ ವ್ಯಾಪಾರಿಗಳು ಕೂಡ ಸಂಚಾರಕ್ಕೆ ಅಡಚಣೆ ಆಗದಂತೆ ಗಮನಹರಿಸಿ ವ್ಯಾಪಾರ ನಡೆಸಬೇಕು ಎಂದರು.

ಅಪ್ರಾಪ್ತರಿಗೆ ಪಾಲಕರು ವಾಹನಗಳನ್ನು ಚಾಲನೆಗೆ ನೀಡಬಾರದು. ಲೋಪಕಂಡು ಬಂದರೆ ಸಾವಿರಾರು ರೂ. ದಂಡವನ್ನು ಕೋರ್ಟ್ ಮೂಲಕ ಕಟ್ಟಬೇಕಾಗುತ್ತದೆ. ಅಲ್ಲದೆ ಶಿಕ್ಷೆ ಕೂಡ ಅನುಭವಿಸಬೇಕಾಗುತ್ತದೆ ಎಂದು ತಿಳಿವಳಿಕೆ ನೀಡಿದರು. ಸಬ್‌ಇನ್ಸ್‌ಪೆಕ್ಟರ್ ಧನರಾಜ್, ಸಿಬ್ಬಂದಿ ಹಾಜರಿದ್ದರು. ಹೆಲ್ಮೆಟ್ ಧರಿಸದ ಬೈಕ್ ಸವಾರರಿಗೆ ದಂಡ ವಿಧಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net