ಸಂಚಾರ ನಿಯಮಗಳ ಅರಿವು ಇರಲಿ

8
ಮುನ್ಯಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಎನ್​ಎಸ್​ಎಸ್​ ವಾರ್ಷಿಕ ಶಿಬಿರದಲ್ಲಿ ಶಿವಾನಂದ ಮಡಿವಾಳರ ಮಾತನಾಡಿದರು. ಎನ್​.ಎಸ್​. ಒಡೆಯರ, ಮಲ್ಲಪ್ಪ ಪಾಟೀಲ, ಶಿವಾನಂದ ಬಿಳ್ಳೂರ, ರಾಜು ಪತ್ತಾರ ಇತರರಿದ್ದರು.
Published on

ಮೂಡಲಗಿ: ವಿದ್ಯಾರ್ಥಿಗಳಿಗೆ ಕಾನೂನು ಹಾಗೂ ಸಂಚಾರ ನಿಯಮಗಳ ಅರಿವು ಅಗತ್ಯವಾಗಿದೆ ಎಂದು ಮಡಿವಾಳ ಸಮುದಾಯದ ಮುಖಂಡ ಶಿವಾನಂದ ಮಡಿವಾಳರ ಹೇಳಿದರು.

ಪಟ್ಟಣದ ಆರ್​ಡಿಎಸ್​ ಕಲಾ ವಾಣಿಜ್ಯ, ವಿಜ್ಞಾನ ಹಾಗೂ ಸಮಾಜಕಾರ್ಯ ಪದವಿ ಮಹಾವಿದ್ಯಾಲಯ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಎನ್​ಎಸ್​ಎಸ್​ ಕೋಶದ ವತಿಯಿಂದ ಸಮೀಪದ ದತ್ತು ಗ್ರಾಮ ಮುನ್ಯಾಳದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎನ್​ಎಸ್​ಎಸ್​ ವಾರ್ಷಿಕ ಶಿಬಿರದಲ್ಲಿ ಮಾತನಾಡಿದರು.

ಮೂಡಲಗಿ ಪೊಲೀಸ್​ ಠಾಣೆಯ ಹವಾಲ್ದಾರ್​ ಎನ್​.ಎಸ್​. ಒಡೆಯರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳ ಪ್ರಮಾಣ ಹೆಚ್ಚಾಗಿದ್ದು, ಹೆಲ್ಮೆಟ್​ ಹಾಗೂ ಸೀಟ್​ಬೆಲ್ಟ್​ ಧರಿಸಿ ವಾಹನ ಚಲಾಯಿಸಬೇಕು. ಹಾಗೇ ಮಾಡುವುದರಿಂದ ಸಂಭಾವ್ಯ ಜೀವನಷ್ಟ ತಪ್ಪಿಸಬಹುದು, ಪೊಲೀಸ್​ ಇಲಾಖೆ ಜತೆಗೆ ಜನರ ಸಹಕಾರ ಅಗತ್ಯವಾಗಿದೆ ಎಂದರು.
ಅತಿಥಿ ಉಪನ್ಯಾಸಕ ಮಲ್ಲಪ್ಪ ಪಾಟೀಲ ಮಾತನಾಡಿದರು. ಶಿವಾನಂದ ಬಿಳ್ಳೂರ, ಮಡೆಪ್ಪ ಒಡೆಯರ, ಮುತ್ತು ಒಡೆಯರ, ಪಂಚು ಬೆಣ್ಣಿ , ಪ್ರಕಾಶ ಚೌಡಕಿ, ರಾಜು ಪತ್ತಾರ, ಸಂಜೀವ ಮಂಟೂರ, ಚಂದ್ರಿಕಾ ಧರ್ಮಟ್ಟಿ , ಸುಕನ್ಯಾ ಬೋಳಿ, ಪ್ರಜ್ವಲ್​ ಗುದಗನ್ನವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net