ಸಂಚಾರ ನಿಯಮಗಳ ಜಾಗೃತಿ

01
Published on

ಸುಂಟಿಕೊಪ್ಪ : ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಕಾರು ಚಲಾಯಿಸುವಾಗ ಚಾಲಕರು ಸೀಟ್ ಬೆಲ್ಟ್ ಹಾಕಬೇಕು ಎಂದು ಸಾರಿಗೆ ಪ್ರಾಧಿಕಾರದ ಅಧಿಕಾರಿ ಶಿವಕುಮಾರ್ ಹೇಳಿದರು.

ಸುಂಟಿಕೊಪ್ಪ ವಾಹನ ಚಾಲಕರ ನಿಲ್ದಾನದಲ್ಲಿ ಗುರುವಾರ ಆಯೋಜಿಸಿದ್ದ 36ನೇ ರಾಷ್ಟ್ರೀಯ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಾಹನ ಮಾಲೀಕರು ಹಾಗೂ ಚಾಲಕರು ಎಲ್ಲ ದಾಖಲಾತಿಯೊಂದಿಗೆ ಜಾಗ್ರತೆಯಿಂದ ವಾಹನ ಚಾಲನೆ ಮಾಡುವಂತೆ ತಿಳಿಸಿದರು.

ವಾಹನಕ್ಕೆ ಸಂಬಂಧಿಸಿದ ದಾಖಲಾತಿ ಪತ್ರಗಳನ್ನು ವಾಹನದಲ್ಲಿರಿಸಿಕೊಳ್ಳಬೇಕು. ಮೋಜಿಗಾಗಿ ವಾಹನ ಚಲಾಯಿಸಿ ಜೀವಕ್ಕೆ ಕುತ್ತು ತರದಂತೆ ಜಾಗ್ರತೆ ವಹಿಸಿ. ಚಾಲನೆ ವೇಳೆ ಮೊಬೈಲ್ ಬಳಸದಿರಿ. ಮುಂದೆ ಸಾಗುತ್ತಿರುವ ವಾಹನವನ್ನು ಹಿಂದಿಕ್ಕುವಾಗ ಜಾಗ್ರತೆ ವಹಿಸಿ. ಇಲ್ಲದಿದ್ದಲ್ಲಿ ಅಪಘಾತ ಸಂಭವಿಸಿ ಪ್ರಾಣ ಹಾನಿಯಾದರೆ ನಿಮ್ಮನ್ನು ನಂಬಿದ ಕುಟುಂಬದವರನ್ನು ನಡು ನೀರಿನಲ್ಲಿ ಕೈಬಿಟ್ಟು ಅವರ ಜೀವನವನ್ನು ಹಾಳು ಮಾಡಿದಂತಾಗುತ್ತದೆ ಎಂದರು.

ಕಾರ್ಯಕ್ರಮದ ಮಾಹಿತಿ ಒಂದು ದಿನಕ್ಕೆ ಸೀಮಿತವಾಗಿರದೆ ವರ್ಷಪೂರ್ತಿ ಪಾಲಿಸಬೇಕು. ಮೊದಲಿಗೆ ಕುಶಾಲನಗರದ ವಿದ್ಯಾಸಾಗರ ಕಲಾವೇದಿಕೆ ತಂಡದ ರಾಜು ಹಾಗೂ ತಂಡದವರಿಂದ ಬೀದಿ ನಾಟಕ ಮಾಡಿ ಸಂಚಾರ ನಿಯಮಗಳನ್ನು ನಟನೆ ಮೂಲಕ ವಾಹನ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. ಮಡಿಕೇರಿ ಸಾರಿಗೆ ಪ್ರಾಧಿಕಾರದ ಅಧಿಕಾರಿ ಶಿವಕುಮಾರ್, ಪ್ರದೀಪ್, ಸುಂಟಿಕೊಪ್ಪ ಪೊಲೀಸ್ ಸಿಬ್ಬಂದಿ ವಾಹನ ತರಬೇತುದಾರರು, ಆಟೋ ಚಾಲಕರು ವಾಹನ ಚಾಲಕರು ಹಾಗೂ ಬೈಕ್ ಸವಾರರು ಸಾರ್ವಜನಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net