ಸಂಚಾರ ನಿಯಮ ಕಡ್ಡಾಯವಾಗಿ ಪಾಲಿಸಿ

26sor2 (1)
ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಸೊರಬದಲ್ಲಿ ಸಾರ್ವಜನಿಕರಿಗೆ ಸಿಪಿಐ ಎಲ್.ರಾಜಶೇಖರ್ ರಸ್ತೆ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸಿದರು. ಧರ್ಮರಾಜ್, ಸೋಮಾನಾಯ್ಕ, ರಾಜುನಾಯ್ಕ, ಆರ್. ಗಿರೀಶ್ ಇತರರಿದ್ದರು.
Published on

ಸೊರಬ: ಬೈಕ್ ಚಲಾಯಿಸುವಾಗ ಹೆಲ್ಮೆಟ್ ಧರಿಸಿದರೆ ಅಪಘಾತ ಉಂಟಾದಾಗ ಜೀವ ಉಳಿಸಿಕೊಳ್ಳಬಹುದು. ಹೆಲ್ಮೆಟ್ ಧರಿಸದೆ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುವುದರಿಂದ ಪ್ರಾಣ ಹಾನಿ ಸಾಧ್ಯತೆ ಹೆಚ್ಚು ಎಂದು ಪೊಲೀಸ್ ವೃತ್ತ ನಿರೀಕ್ಷಕ ಎಲ್.ರಾಜಶೇಖರ್ ಹೇಳಿದರು.

ಪಟ್ಟಣದ ಪುರಸಭೆ ಎದುರಿನ ವೃತ್ತದಲ್ಲಿ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಮಾತನಾಡಿದರು.

ಬೈಕ್ ಸವಾರರ ಜೀವ ಉಳಿಸುವುದಕ್ಕಾಗಿಯೇ ಹೆಲ್ಮೆಟ್ ಧರಿಸುವ ಕಾನೂನು ಜಾರಿಗೊಳಿಸಲಾಗಿದೆ ಎಂಬುದನ್ನು ಅರಿತುಕೊಳ್ಳಬೇಕು. ಅನೇಕ ಅಪಘಾತಗಳಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದು ಮೃತಪಟ್ಟವರ ಸಂಖ್ಯೆಯೇ ಹೆಚ್ಚಿದೆ. ವಾಹನ ಸವಾರರು, ಮುಖ್ಯವಾಗಿ ಯುವಕರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜೀವ ಮತ್ತು ಜೀವನ ಅಮೂಲ್ಯ ಎಂಬುದನ್ನು ಅರಿತುಕೊಳ್ಳಬೇಕು ಎಂದರು.

ಪಿಎಸ್‌ಐ ಎಂ.ಎಚ್.ನವೀನ್ ಮಾತನಾಡಿ, ಅಪ್ರಾಪ್ತರು ವಾಹನ ಚಾಲನೆ ಮಾಡಿದರೆ ಪಾಲಕರಿಗೆ ಅಥವಾ ವಾಹನಗಳ ಮಾಲೀಕರಿಗೆ 25 ಸಾವಿರ ರೂ. ದಂಡ ವಿಸಲಾಗುವುದು. 18 ವರ್ಷ ತುಂಬಿದ ನಂತರ ಸಾರಿಗೆ ಇಲಾಖೆಯಿಂದ ಚಾಲನಾ ಪರವಾನಗಿ ಪಡೆದು ವಾಹನ ಓಡಿಸಲು ಪಾಲಕರು ಅನುಮತಿ ನೀಡಬೇಕು ಎಂದು ತಿಳಿಸಿದರು.

ಎಎಸ್‌ಐ ಧರ್ಮರಾಜ್, ಹೆಡ್ ಕಾನ್‌ಸ್ಟೆಬಲ್‌ಗಳಾದ ಸೋಮಾನಾಯ್ಕ, ರಾಜು ನಾಯ್ಕ, ಆರ್.ಗಿರೀಶ್, ಪೇದೆಗಳಾದ ಹನುಮಂತಪ್ಪ, ದಿನೇಶ್‌ಕುಮಾರ್, ಇರ್ಶಾದ್ ಖಾನ್, ಡಿ.ಸೋಮಶೇಖರ, ಸಿ.ವಿ.ಉಮೇಶ್, ಕಿರಣ್‌ಕುಮಾರ್, ಸಿ.ಬಿ.ರವೀಂದ್ರ ಇತರರಿದ್ದರು.

ಬೈಕ್ ಚಾಲನೆ ವೇಳೆ ತಲೆಗೆ ಪೆಟ್ಟಾಗಿ ಸಾವಿಗೀಡಾದವರೇ ಹೆಚ್ಚು. ಇದಕ್ಕೆ ಹೆಲ್ಮೆಟ್ ಧರಿಸದಿರುವುದೇ ಮುಖ್ಯ ಕಾರಣ. ನಿಮ್ಮ ಮನೆಯವರು ಹಾಗೂ ನಿಮ್ಮನ್ನು ಅವಲಂಬಿಸಿದವರಿಗಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ವಾಹನಗಳ ಚಾಲನೆ ವೇಳೆ ಚಾಲನಾ ಪರವಾನಗಿ, ವಾಹನಗಳ ದಾಖಲೆ, ವಿಮೆ ಸೇರಿ ಅಗತ್ಯ ದಾಖಲೆಗಳನ್ನು ಇಟ್ಟುಕೊಂಡಿರಬೇಕು.

ಎಂ.ಎಚ್.ನವೀನ್, ಪಿಎಸ್‌ಐ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net