ಸಂಚಾರ ನಿಯಮ ಕಡ್ಡಾಯ ಪಾಲಿಸಿ

RTO Office
Published on

ಬೀದರ್: ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ರಸ್ತೆ ಅಪಘಾತ ಸಂಭವಿಸದಂತೆ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎ. ನಾರಾಯಣ ಸ್ವಾಮಿ ಕೋರಿದರು.

ಇಲ್ಲಿನ ಆರ್.ಟಿ.ಒ ಕಚೇರಿ ಆವರಣದಲ್ಲಿ ಮೋಟಾರು ವಾಹನ ಚಾಲನಾ ತರಬೇತಿ ಶಾಲೆ ಸಂಘ ಏರ್ಪಡಿಸಿದ್ದ ರಾಷ್ಟ್ರೀಯ ಮೋಟಾರು ವಾಹನ ದಿನ ಕಾರ್ಯಕ್ರಮ ಉದ್ಘಾಟಿಸಿದ ಅವರು, ಚಾಲನೆ ವೇಳೆ ವಾಹನದ ದಾಖಲೆಗಳನ್ನು ಇಟ್ಟುಕೊಳ್ಳಬೇಕು ಎಂದರು.

ಮೋಟಾರು ವಾಹನ ನಿರೀಕ್ಷಕ ಮಂಜುನಾಥ ಬಿ.ಕೊರವಿ ಮಾತನಾಡಿ, ತರಬೇತಿ ನೀಡುವಾಗ ವಾಹನದ ವಿವಿಧ ಭಾಗಗಳ ಬಗ್ಗೆ ಮಾಹಿತಿ ನೀಡಿ ನಿಯಮಗಳೊಂದಿಗೆ ಸಂಚಾರ ಸಮಯದಲ್ಲಿನ ಜವಾಬ್ದಾರಿಯನ್ನು ತಿಳಿಸಿಕೊಡಬೇಕು ಎಂದು ಹೇಳಿದರು.ಸಂಚಾರ ಸಿಪಿಐ ವಿಜಯಕುಮಾರ, ನೂತನ ನಗರ ಠಾಣೆ ಪಿಎಸ್ಐ ತಸ್ಲೀಮ್ ಬೇಗಂ, ಸಂಚಾರ ಠಾಣೆ ಪಿಎಸ್ಐ ಎಸ್.ಎಸ್. ಸುರೇಶ ಬಾವಿಮನಿ ಮಾತನಾಡಿದರು.

ಸಂಘದ ಅಧ್ಯಕ್ಷ ಪ್ರಕಾಶ ಗುಮ್ಮೆ, ಕಚೇರಿ ಅಕ್ಷಕ ಖಾಜಾ ಬಿರಯಾನಿ ಬಾಷಾ, ಪ್ರಮುಖರಾದ ದತ್ತಾತ್ರಿ ಅಷ್ಟಗಿಕರ್, ಅಡೆಪ್ಪ ಸಿರ್ಸಿ, ಉಮೇಶ ಧೂಳೆ, ಬಾಲಾಜಿ ಟೋಕರೆ, ಹಾಜಿ ಕಮಠಾಣ, ಶೇಖ್ ಸೋಯಬ್ ಸಿದ್ಧಿಖಿ, ಶೇರ್ಖಾನ್, ಅಹ್ಮದ್ ಖಾನ್, ಶ್ರೀಕಾಂತ, ಪಂಡಿತ, ಇಮ್ರಾನ್ ಖಾನ್, ಪವನ್ ಪಾಟೀಲ್, ಸುಧಾಕರ ಬಿರಾದಾರ್, ನರೇಶ ದಂಡೆ, ಶಿವಪುತ್ರ ಚೌಳೆ, ವೀರೇಂದ್ರ ಎಂ.ನಾಗೇಶ, ಅನ್ಮೋಲ್, ಅಂಬಿಕಾ, ಸಂಗೀತಾ ಇತರರಿದ್ದರು.

ಸಂಘದ ಉಪಾಧ್ಯಕ್ಷ ಶಿವರಾಜ ಜಮಾದಾರ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ರಾಜಕುಮಾರ ಬಿರಾದಾರ್ ನಿರೂಪಣೆ ಮಾಡಿದರು. ಸಾಗರ ಉಂಡೆ ವಂದಿಸಿದರು. ಇದಕ್ಕೂ ಮುನ್ನ ಅಂಬೇಡ್ಕರ್ ವೃತ್ತದಿಂದ ಕಚೇರಿವರೆಗೆ ವಾಹನಗಳ ಮೆರವಣಿಗೆ ನಡೆಸಿ ಸೀಟ್ ಬೆಲ್ಟ್ ಧರಿಸದವರಿಗೆ ಗುಲಾಬಿ ಹೂ ನೀಡಿ ನಿಯಮ ಪಾಲಿಸುವಂತೆ ತಿಳಿಹೇಳಲಾಯಿತು. ಸಂಘದಿಂದ ಉಚಿತವಾಗಿ ಹೆಲ್ಮೆಟ್ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net