ಸಂಘದ ಸಿದ್ಧಾಂತ ಅರಿತು ಅಭಿವೃದ್ಧಿ ಕಡೆ ಗಮನ ಹರಿಸಿ

oppo_0
ತಿರುಮಲಪುರ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಸಮಾರಂಭದಲ್ಲಿ ಬಿ.ವಿ.ಜವರೇಗೌಡ, ರಾಜೇಗೌಡ,ಪ್ರಶಾಂತ್‌ಗೌಡ. ಬೋರೇಗೌಡ, ಮಂಜು ಇತರರು ಭಾಗವಹಿಸಿದ್ದರು.
Published on

ಬೈಲಕುಪ್ಪೆ: ಗ್ರಾಮೀಣ ಭಾಗದಲ್ಲಿ ಸಂಘ ಕಟ್ಟಿ ಜಯಂತ್ಯುತ್ಸವ ಆಚರಿಸುವುದು ಮುಖ್ಯವಲ್ಲ. ಸಂಘದ ಸಿದ್ಧಾಂತವನ್ನು ಅರಿತು ಗ್ರಾಮದ ಅಭಿವೃದ್ಧಿ ಕಡೆ ಹೆಚ್ಚು ಒತ್ತು ಕೊಡುವುದು ಬಹಳಮುಖ್ಯ ಎಂದು ಹಿರಿಯ ವಕೀಲ ಬಿ.ವಿ.ಜವರೇಗೌಡ ಅಭಿಪ್ರಾಯಪಟ್ಟರು.

ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿರುಮಲಪುರ ಗ್ರಾಮದಲ್ಲಿ ಮಂಗಳವಾರ ನಾಡಪ್ರಭು ಕೆಂಪೇಗೌಡರ 515ನೇ ಜಯಂತ್ಯುತ್ಸವ ಹಾಗೂ ಸಂಘದ ದ್ವಿತೀಯ ವರ್ಷದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.

ಕೆಂಪೇಗೌಡರು ಒಂದು ವರ್ಗಕ್ಕೆ ಸೀಮಿತವಾದವರಲ್ಲ. ಕಳೆದ ಬಾರಿ ಶ್ರೀ ಸೋಮನಾಥ ಸ್ವಾಮೀಜಿ ಅವರನ್ನು ಕರೆಸಿ ಅದ್ದೂರಿಯಾಗಿ ಒಕ್ಕಲಿಗ ಗೌಡರ ಸಂಘ ಉದ್ಘಾಟಿಸಿದಾಗ ನಾನೂ ಹಾಜರಿದ್ದೆ. ಗ್ರಾಮದ ಅಭಿವೃದ್ಧಿ ಜತೆಗೆ ಎಲ್ಲ ವರ್ಗದ ಜನರ ಮೇಲೆತ್ತುವ ಕೆಲಸ ಆಗಬೇಕು. ಕಟ್ಟಕಡೆಯ ಮನುಷ್ಯನಿಗೆ ಸವಲತ್ತುಗಳು ತಲುಪಬೇಕು ಎಂದರು.

ತಾಲೂಕಿನ ಒಕ್ಕಲಿಗರ ಸಂಘದ ಗೌರವ ಅಧ್ಯಕ್ಷ ಪ್ರಶಾಂತ್‌ಗೌಡ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಬೆಂಗಳೂರಿನ ವಿವಿಧ ಕೋಮಿನ ಜನರ ಏಳಿಗೆಗೆ ಶ್ರಮಿಸಿ ಅಭಿವೃದ್ಧಿಪಡಿಸಿ ಸುತ್ತಮುತ್ತ ಕೆರೆಗಳ ಅಭಿವೃದ್ಧಿಗೆ ಒತ್ತುಕೊಟ್ಟು ದುಡಿಯುವ ರೈತರಿಗೆ ಸಹಕರಿಸಿದ್ದರು ಎಂದು ಸ್ಮರಿಸಿದರು.
ತಾಲೂಕಿನ ರೋಟರಿ ಮಿಟ್ ಟೌನ್‌ನ ತಿರುಮಲಪುರದ ರಾಜೇಗೌಡ ಮಾತನಾಡಿ, ಸಮಾಜಮುಖಿ ಕೆಲಸಕ್ಕೆ ಸಂಘದ ಯುವಕರು ಮುಂದಾಗಬೇಕು ಎಂದು ಕರೆಕೊಟ್ಟರು.

ಬೈಲಕುಪ್ಪೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೋರೇಗೌಡ, ಮುಖ್ಯಶಿಕ್ಷಕ ಮಂಜು ಮಾತನಾಡಿದರು. ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರುದ್ರಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯೆ ಪದ್ಮಾವತಿ, ಎಸ್‌ಟಿಎಂಸಿ ಅಧ್ಯಕ್ಷ ರಾಮೇಗೌಡ, ಗ್ರಾಮದ ಮುಖಂಡರಾದ ಮಹದೇವ್, ರಮೇಶ್, ಮೋಹನ್, ಜಗದೀಶ್, ದಿನೇಶ್, ಅಯ್ಯಪ್ಪ, ಪರಮೇಶ್‌ಗೌಡ, ಸುನಿಲ್, ಹಿರಿಯ ಮುಖಂಡ ಕರೀಗೌಡ. ಸಂಘದ ಅಧ್ಯಕ್ಷ ಚೇತನ್, ಗೌರವಾಧ್ಯಕ್ಷ ರಮೇಶ್‌ಗೌಡ. ಕಾರ್ಯದರ್ಶಿ ತಿಲಕ್, ಸಹ ಕಾರ್ಯದರ್ಶಿ ಸಂತೋಷ್, ಉಪಾಧ್ಯಕ್ಷ ರವೀಶ್, ಖಜಾಂಚಿ ಸುರೇಶ್, ಪದಾಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net