

ಕಲಬುರಗಿ: ರಾಷ್ಟ್ರೀಯ ಸ್ವಯಂಸೇವಕ ಸಂದ ಭೂಮಿಕೆ ರಾಷ್ಟ್ರೀಯತೆ ಹಾಗೂ ರಾಷ್ಟ್ರೀಯ ವಿಚಾಧಾರೆಗಳಾಗಿವೆ. ಹೀಗಾಗಿಯೇ ಸಂಘದ ಸಂಸ್ಥಾಪಕ ಡಾಕ್ಟರ್ ಜೀ ಸಹ ಹಿಂದುತ್ವವನ್ನು ರಾಷ್ಟ್ರೀಯತೆಗೆ ಸಮೀಕರಣ ಮಾಡಿದ್ದಾರೆ ಎಂದು ರ‍್ನಾಟಕ ಉತ್ತರ ಪ್ರಾಂತದ ಪ್ರಾಂತ ಕರ‍್ಯಕಾರಿಣಿ ಸದಸ್ಯ ರವೀಂದ್ರ ವ್ಯಾಖ್ಯಾನಿಸಿದರು.
ನಗರದ ರೋಟರಿ ಕ್ಲಬ್ ಶಾಲೆಯ ಮೈದಾನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ನಗರದಿಂದ ಭಾನುವಾರ ಹಮ್ಮಿಕೊಂಡ ಯುಗಾದಿ ಉತ್ಸವದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿ, ರಾಷ್ಟ್ರೀಯತೆ, ಸ್ವಯಂಸೇವಕತ್ವ ಹಾಗೂ ಸಂಘಟನೆಯನ್ನು ಮನೆಯ ರೀತಿಯಲ್ಲಿ ಸಂಟಿಸಬೇಕಿದೆ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂ ೧೦೦ನೇ ರ‍್ಷದ ಹೊಸ್ತಿಲಲ್ಲಿ ನಿಂತ್ತಿದೆ. ನೂರು ರ‍್ಷದಿಂದ ಸಂಘದ ವಿಚಾರ ಒಂದೇ ಅದುವೇ ರಾಷ್ಟ್ರೀಯತೆ. ಸಂಘದ ಮೌಲ್ಯಮಾಪನ ಹಾಗೂ ರ‍್ಥ ಮಾಡಿಕೊಳ್ಳಲು ಅದರೊಳಗೆ ಬಂದಾಗ ಮಾತ್ರ ಸಾಧ್ಯ. ಸಂಘದಲ್ಲಿ ದೇವರ ಪೂಜೆ ನಡೆಯುವುದಿಲ್ಲ. ದೇಶದ ಪೂಜೆ ನಡೆಯುತ್ತದೆ. ಸಂಘದ ಮೂಲ ಆಧಾರವೇ ರಾಷ್ಟ್ರೀಯತೆಯಿಂದ ಕೂಡಿದ್ದು, ದೇಶ ನನ್ನದು ಎಂದು ತಿಳಿದು ಕೆಲಸ ಮಾಡಲು ಪ್ರೇರಣೆ ನೀಡುತ್ತದೆ ಎಂದರು.
ಯುಗಾದಿ ದಿನದಂದೆ ಸಂಘದ ಸಂಸ್ಥಾಪಕರಾದ ಡಾ.ಹೆಡಗೇವಾರರ ಜನನವಾಯಿತು. ೫೧ ರ‍್ಷ ಅವರ ಜೀವನ ಮತ್ತು ಸಾಧನೆ ಒಮ್ಮೆ ನಾವೆಲ್ಲರೂ ಮೆಲುಕು ಹಾಕುವ ಅನಿವರ‍್ಯತೆಯಿದೆ. ಡಾ.ಹೆಡಗೇವಾರರ ಕಣ್ಮುಂದೆ ಕೇವಲ ದೇಶದ ಸ್ವಾತಂತ್ರ‍್ಯ ಮಾತ್ರ ಇರಲಿಲ್ಲ. ಮೀಗಿಲಾಗಿ ಸ್ವಾತಂತ್ರ‍್ಯದ ನಂತರ ಅದನ್ನು ಉಳಿಸುವುದು ಮುಖ್ಯವಾಗಿತ್ತು. ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಟ ನಡೆಸಿದ ಮಹನೀಯರಲ್ಲಿ ಡಾಕ್ಟರ್ ಜೀ ಒಬ್ಬರು. ಆದರೆ, ಕೆಲ ಕಲಬುರಗಿ ರಾಜಕೀಯ ನಾಯಕರು ದೆಹಲಿಯಲ್ಲಿ ಉನ್ನತ ಸ್ಥಾನದಲ್ಲಿ ಕುಂತು ಸ್ವಾತಂತ್ರ‍್ಯದಲ್ಲಿ ಆರ್ಎಸ್ಎಸ್ ಪಾಲು ಏನಿದೆ ಎಂದು ಪ್ರಶ್ನಿಸಿ, ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದರು.
ಮುನ್ನ ಸ್ವಯಸೇವಕರಿಂದ ಶಾರೀರಿಕ ಪ್ರರ‍್ಶನ ನಡೆಯಿತು. ಜಿಲ್ಲಾ ಸಂಘಚಾಲಕ ಅಶೋಕ್ ಪಾಟೀಲ್ ೨೫ಕ್ಕೂ ಅಧಿಕ ಹೊಸ ಜವಾಬ್ದಾರಿ ಘೋಷಿಸಿದರು. ಪರಸ್ಪರ ಬೇವು ಬೆಲ್ಲ ಸಿಹಿ ಹಂಚಿ ಶುಭಾಶಯ ತಿಳಿಸಿದರು. ಮನೀಶ್ ಜಾಜೂ ಅಧ್ಯತೆ ವಹಿಸಿದ್ದರು. ವಿಭಾಗ ಪ್ರಚಾರಕ ವಿಜಯ ಮಹಾಂತೇಶ, ನಗರ ಕರ‍್ಯವಾಹ ಸಂಜೀವ ಹುಲಮನಿ ಇತರರಿದ್ದರು.