ಸಂಘಟಿತರಾದಗಲೇ ಹಿಂದುಗಳಿಗಗೆ ಉಳಿಗಾಲ

klb8
ಜೇವರ್ಗಿಯಲ್ಲಿ ಜೈಶ್ರೀರಾಮ್ ಸೇನೆ ಮಹಾಗಣಪತಿ ಶೋಭಾಯಾತ್ರೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಗೌತಮ್ ಖಟ್ಟರ್, ಸಂದೀಪ ಗುರೂಜಿ, ಚಂದ್ರಶೇಖರ ಕೋಟೆ, ವೀರಶೆಟ್ಟಿ ಖ್ಯಾಮಾ ಬೀದರ್, ರೌಫ್ ಹವಾಲ್ದಾರ್ ಇದ್ದರು.
Published on

ಜೇವರ್ಗಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಹಿಂದು ವಿರೋಧಿ ನೀತಿ ಅನುಸರಿಸುತ್ತಿದೆ. ಹಿಂದು ಕಾರ್ಯಕರ್ತರ ವಿರುದ್ಧ ಸುಳ್ಳು ಕೇಸ್ ಹಾಕಿ, ಬೆದರಿಸುವ ತಂತ್ರಗಾರಿಕೆ ಮಾಡುತ್ತಿದೆ ಎಂದು ಸನಾತನ ಮಹಾಸಂಘದ ಸಂಸ್ಥಾಪಕ ಅಧ್ಯಕ್ಷ ಗೌತಮ್ ಖಟ್ಟರ್ ದೂರಿದರು.
ಜೈಶ್ರೀರಾಮ್ ಸೇನೆ ಮಹಾಗಣಪತಿಯ ವಿಸರ್ಜನೆ ಶೋಭಾಯಾತ್ರೆ ನಿಮಿತ್ತ ಶುಕ್ರವಾರ ಸಂಜೆ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಕೆಲ ದಿನಗಳ ಹಿಂದೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಒಂದು ಸಮುದಾಯದವರು ಕಲ್ಲು ತೂರಾಟ ಮಾಡಿ, ಅಂಗಡಿಗಳಿಗೆ ಬೆಂಕಿ ಹಚ್ಚಿದರು. ಆದರೆ ಸರ್ಕಾರ ಮಾತ್ರ ಗಣೇಶ ಪ್ರತಿಷ್ಠಾಪನೆ ಮಾಡಿದವರ ವಿರುದ್ಧವೇ ಕೇಸ್ ದಾಖಲಿಸಿತು ಎಂದು ಕಿಡಿಕಾರಿದರು.
ಹಿಂದುಗಳು ಮೊದಲು ಒಗ್ಗಟ್ಟಾಗಬೇಕು. ಇಲ್ಲದಿದ್ದರೆ ನಮಗೆ ಉಳಿಗಾಲವಿಲ್ಲ. ಜಾತಿಗಳು ಮನೆಯಲ್ಲಿಟ್ಟು, ಮೊದಲು ಹಿಂದುಗಳಾಗೋಣ. ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಹಿಂದುಗಳ ರಕ್ಷಣೆಗೆ ಪ್ರತಿಯೊಬ್ಬರೂ ಕಂಕಣಬದ್ಧರಾಗಬೇಕು ಎಂದು ಕರೆ ನೀಡಿದರು.
ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಶೋಭಾಯಾತ್ರೆಗೆ ಚಾಲನೆ ನೀಡಿದರು.

ಪ್ರಮುಖರಾದ ರಮೇಶಬಾಬು ವಕೀಲ, ಬಸವರಾಜ ಪಾಟೀಲ್ ನರಿಬೋಳ, ಸಂದೀಪ ಗುರೂಜಿ, ಚಂದ್ರಶೇಖರ ಕೋಟೆ, ವೀರಶೆಟ್ಟಿ ಖ್ಯಾಮಾ ಬೀದರ್, ರೌಫ್ ಹವಾಲ್ದಾರ್, ಮಹಿಬೂಬ್ ಚನ್ನೂರ, ಭಾವಾಸಾಬ್ ಅಡತ್, ಇಬ್ರಾಹಿಂ ಪಟೇಲ್, ಅಥೀಕ್‌ಸೇಠ ಚರಮ್, ಶರಣು ಕೋಳಕೂರ, ವಿರೇಶ ಪಾಟೀಲ್ ಕಟ್ಟಿಸಂಗಾವಿ, ಸಿದ್ದು ಸಾಹು ಅಂಗಡಿ, ಶರಣಗೌಡ ಯಲಗೋಡ, ವಿಜಯಕುಮಾರ ಸೊನ್ನ, ಸಿದ್ದು ಗಜ, ವಿಜಯಕುಮಾರ ಹಂದನೂರ, ನವೀನ ಗೋಗಿಕರ್, ಅನೀಲ್ ಪವಾರ್, ರಾಕೇಶ ಜಮಾದಾರ, ರಮೇಶ ಪಾಟೀಲ್, ಮಲ್ಲು ಟಕುಲಕರ್, ಭೀಮು ಹಳ್ಳಿ, ಶಿವಲಿಂಗ ಹಳ್ಳಿ, ಈಶ್ವರ ಹಿಪ್ಪರಗಿ, ವಿಜಯಕುಮಾರ ಬೆಲ್ಲದ್ ಇತರರಿದ್ದರು.

ಶೋಭಾಯಾತ್ರೆಯಲ್ಲಿ ಶ್ರೀರಾಮ, ಹನುಮ, ಶಿವಾಜಿ ಮಹಾರಾಜರ ವೇಷಧಾರಿಗಳು ಗಮನಸೆಳೆದರು. ಅಲ್ಲದೆ ಎಲ್ಲೆಡೆ ಕೇಸರಿ ಧ್ವಜಗಳು ರಾರಾಜಿಸಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net