

ಶೃಂಗೇರಿ: ಸಂಘಟನೆಯಿಂದ ಸಮುದಾಯದ ಅಭಿವೃದ್ಧಿಯಾಗುತ್ತದೆ ಎಂದು ಕುಂಬಾರ ಯುವ ವೇದಿಕೆ ಅಧ್ಯಕ್ಷ ಮೆಣಸೆ ಚಂದ್ರಶೇಖರ್ ಹೇಳಿದರು.
ಮೆಣಸೆ ಗ್ರಾಪಂ ಕಲ್ಕಟ್ಟೆ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಕುಂಬಾರ ಯುವ ವೇದಿಕೆ ಏರ್ಪಡಿಸಿದ್ದ ಶ್ರೀ ಮಹಾಗಣಹೋಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಸಮುದಾಯ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದು, ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವುದರಿಂದ ಸಮಾಜದಲ್ಲಿ ಸಾಧನೆ ಮಾಡಬಹುದಾಗಿದೆ ಎಂದರು.
ಕುಂಬಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ್ ಮಾತನಾಡಿ, ತಾಲೂಕು ಕೇಂದ್ರದಲ್ಲಿ ನಮ್ಮ ಸಮುದಾಯವನ್ನು ಸಂಘಟಿಸುವ ಮೂಲಕ ಸಂಘಕ್ಕೆ ಶಕ್ತಿ ತುಂಬಲಾಗಿದೆ. ಸಂಘಟಿತರಾಗಿದ್ದರೆ ನಮಗೆ ಹೆಚ್ಚಿನ ಶಕ್ತಿ ಬರುತ್ತದೆ. ಮಹಿಳೆಯರು ಸ್ವಉದ್ಯೋಗಕ್ಕೆ ಮಹತ್ವ ನೀಡಬೇಕು ಎಂದರು.
ಈಶ್ವರ್ ನರಸಿಪುರ, ಭೋಜು ಕುಲಾಲ್, ದಿಲೀಪ್, ಶರತ್, ಉದಯ್, ಮಂಜು, ಲಲಿತಾ ರವೀಂದ್ರ, ಹರೀಶ್ ಮೂಡಿಗೆರೆ, ಬಾಬು ಮೂಲ್ಯ ಇತರರಿದ್ದರು.