ಸಂಘಟನೆಯಿಂದ ಯಶಸ್ಸು ಸಾಧ್ಯ

09-Kalaghatagi 1
Published on

ಕಲಘಟಗಿ: ಜನೋಪಯೋಗಿ ಕಾರ್ಯಗಳಲ್ಲಿ ಒಬ್ಬೊಬ್ಬರೇ ತೊಡಗಿಸಿಕೊಳ್ಳುವುದಕ್ಕಿಂತ ಸಂಘಟನಾತ್ಮಕವಾಗಿ ತೊಡಗಿಸಿಕೊಂಡಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಸಂಸ್ಥಾನ ವಿರಕ್ತಮಠ ರಾಯನಾಳದ ಶ್ರೀ ಅಭಿನವ ರೇವಣಸಿದ್ಧೇಶ್ವರ ಶ್ರೀಗಳು ಹೇಳಿದರು.

ತಾಲೂಕಿನ ಗಳಗಿಹುಲಕೊಪ್ಪ ಗ್ರಾಮದ ಶ್ರೀ ಗ್ರಾಮದೇವಿಯರ ಶತಮಾನೋತ್ಸವ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜ್ಞಾನ ಜ್ಯೋತಿ ಸೇವಾ ಸಂಸ್ಥೆ ಉದ್ಘಾಟನೆ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ‘ಸಂಸ್ಥೆ ಹುಟ್ಟು ಹಾಕುವಾಗಿನ ಧ್ಯೇಯೋದ್ದೇಶಗಳನ್ನು ಈಡೇರಿಸುವಲ್ಲಿ ನಿಸ್ವಾರ್ಥ ಮನೋಭಾವನೆಯಿಂದ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಎಲ್ಲ ಸದಸ್ಯರು ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಕರೊನಾ ಸೇನಾನಿಗಳಾಗಿ ಉತ್ತಮ ಸೇವೆ ಸಲ್ಲಿಸಿದ ಪಿಡಿಒ ವೆಂಕಟೇಶ ಮುರಗೋಡ, ವೈದ್ಯಾಧಿಕಾರಿ ಡಿ.ಬಿ. ಸಂಕೇತ, ಬೀಟ್ ಪೊಲೀಸ್ ಉಳವೇಶ ಸಂಪಗಾಂವ, ನಿವೃತ್ತ ಸೈನಿಕರಾದ ದ್ಯಾಮಣ್ಣ ನೀಲಣ್ಣವರ, ದಯಾನಂದ ಕೆಲಗೇರಿ, ಮಂಜುನಾಥ ಬಮ್ಮಿಗಟ್ಟಿ, ಶಿಕ್ಷಕರಾದ ಎ.ಡಿ. ಕುಲಕರ್ಣಿ, ಕೆ.ಕೆ. ಪಾಟೀಲ, ರಮೇಶ ಪಂತ, ಆರ್.ಜೆ. ಲಮಾಣಿ, ಉದಯ ನಾಯಕ, ನಿವೃತ್ತ ಶಿಕ್ಷಕ ಆರ್.ವಿ. ಪತ್ತಾರ ಸೇರಿದಂತೆ ಗ್ರಾಮದ ಆರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಈ ವೇಳೆ ಜ್ಞಾನ ಜ್ಯೋತಿ ಸೇವಾ ಸಂಸ್ಥೆ ಹುಟ್ಟು ಹಾಕಿದ ಶಂಕರರಾವ್ ಶಿಂಧೆ, ಉಳವಪ್ಪ ಕಂಚನಳ್ಳಿ, ನಿಂಗಪ್ಪ ಬ್ಯಾಹಟ್ಟಿ, ಮಂಜುನಾಥ ತಂಬೂರ, ವಿಜಯ ಹರ್ತಿ, ಯಲ್ಲಪ್ಪಗೌಡ ಪಾಟೀಲ, ಮಲ್ಲಿಕಾರ್ಜುನ ಹಿರೇಮಠ, ನಾಗರಾಜ ರಾಮಾಪೂರ, ನಿಂಗಪ್ಪ ಆಸಮಟ್ಟಿ, ಸಂತೋಷ ಪಾಟೀಲ, ಭರತ ಬಾಳಿ, ಇತರರಿದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net