ಸಂಘಟನೆಯಿಂದ ಒಳ್ಳೆಯ ಕಾರ್ಯ ನಡೆಯಲಿ

16BK1
ಬಸವಕಲ್ಯಾಣದಲ್ಲಿ ಯುವ ಕ್ರಾಂತಿ ಸಂಘನೆಯಿಂದ ಶನಿವಾರ ಆಯೋಜಿಸಿದ್ದ ಜಿಲ್ಲಾ ಯುವ ಸಮ್ಮೇಳನವನ್ನು ಶ್ರೀ ಡಾ.ಹವಾ ಮಲ್ಲಿನಾಥ ಮಹಾರಾಜ ಉದ್ಘಾಟಿಸಿದರು. ಶ್ರೀ ಮಲ್ಲಿಕಾರ್ಜುನ ಮುತ್ಯಾ, ಶ್ರೀ ಬೀರಪ್ಪ ಮುತ್ಯಾ, ಮಾಜಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಗುಂಡುರೆಡ್ಡಿ ಕಮಲಾಪುರೆ, ಪ್ರದೀಪ ವಾತಡೆ, ಲತಾ ಹಾರಕೂಡೆ, ಸುಧೀರ ಕಾಡಾದಿ, ಆನಂದ ಪಾಟೀಲ್, ಸಂಗಮೇಶ ಭೂರೆ ಇತರರಿದ್ದರು.
Published on

ಬಸವಕಲ್ಯಾಣ: ಸಂಘಟನೆಯ ಮೂಲಕ ಜನಪರವಾದ ಮತ್ತಷ್ಟು ಒಳ್ಳೆಯ ಕಾರ್ಯಗಳು ನಡೆಯಲಿ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ಹುಮನಾಬಾದ್ ಹೇಳಿದರು.

೧೦೮ ಅಡಿ ಬಸವೇಶ್ವರರ ಮೂರ್ತಿ ಪರಿಸರದಲ್ಲಿಯ ಮಾತೆ ಮಹಾದೇವಿ ಫಂಕ್ಷನ ಹಾಲ್‌ನಲ್ಲಿ ಯುವ ಕ್ರಾಂತಿ ಸಂಘನೆಯಿಂದ  ಶನಿವಾರ ಆಯೋಜಿಸಿದ್ದ ಸಂಘಟನೆಯ ೧೩ನೇ ವಾರ್ಷಿಕೋತ್ಸವ ಹಾಗೂ ಜಿಲ್ಲಾ ಯುವ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗುಂಡುರೆಡ್ಡಿ ಅವರಿಗೆ ರಾಜಕೀಯದಲ್ಲಿ ಭವಿಷ್ಯವಿದೆ. ಅವರ ನೇತೃತ್ವದ ಸಂಘಟನೆಯ ಕಾರ್ಯಕ್ಕೆ ತಮ್ಮ ಬೆಂಬಲವಿದೆ ಎಂದರು.

ಡಾ.ಬಾಬಾಸಾಹೇಬ ಅಂಬೇಡ್ಕರ್ ತೋರಿದ ಮಾರ್ಗದಲ್ಲಿ ಯುವಕರು ನಡೆಯಬೇಕು. ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುವ ಜತೆಗೆ ಸಂಘಟನೆ ಮಾಡಬೇಕು. ಸಂಘಟನೆಯ ಮೂಲಕ ರಚನಾತ್ಮಕ ಕಾರ್ಯಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮಾತನಾಡಿ, ಗುಂಡುರೆಡ್ಡಿ ಅವರ ನೇತೃತ್ವದಲ್ಲಿ ಯುವ ಕ್ರಾಂತಿ ಸಂಘಟನೆ ವಾರ್ಷಿಕೋತ್ಸವ ಆಚರಿಸುತ್ತಿರುವದು ಖುಷಿ ತಂದಿದೆ. ಯುವಕರು ಜಾಗೃತರಾಗಿ ಸಂಘಟಿತರಾಗಿ ಹಳ್ಳಿ-ಹಳ್ಳಿಗಳಲ್ಲಿಯೂ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ಯುವಕರನ್ನು ರಾಜಕೀಯವಾಗಿ ಬೆಳೆಸುವ ಕೆಲಸ ನಡೆಯಬೇಕು. ಹೋರಾಟ ಮಾಡುವರಿಗೆ ಎಲ್ಲರೂ ಪಕ್ಷಾತೀತವಾಗಿ ಬೆಂಬಲಿಸಬೇಕು ಎಂದು ಹೇಳಿದರು.

ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ ಮಾತನಾಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಗುಂಡುರೆಡ್ಡಿ ಮಾಡುತ್ತಿದ್ದಾರೆ. ರಾಜಕಾರಣಿಗಳಿಗೆ ವೇದಿಕೆಯ ಮೇಲೆ ನಿಲ್ಲಿಸುವ ಶಕ್ತಿ ಯುವಕರ ಕೈಯಲ್ಲಿದೆ ಎಂದರು.

ಯುವ ಕ್ರಾಂತಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಗುಂಡುರೆಡ್ಡಿ ಕಮಲಾಪುರೆ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಉಪಾಧ್ಯಕ್ಷೆ ಲತಾ ಹಾರಕೂಡೆ, ಯುವ ಮುಖಂಡ ಶಿವಕುಮಾರ ಶಟಗಾರ ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ಜೈ ಭಾರತ ಮಾತಾ ಸೇವಾ ಸಮಿತಿ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ಶ್ರೀ ಡಾ.ಹವಾ ಮಲ್ಲಿನಾಥ ಮಹಾರಾಜ ಸಮ್ಮೇಳನ ಉದ್ಘಾಟಿಸಿದರು. ಶಹಾಪುರ ತಾಲೂಕಿನ ಶ್ರೀ ಮಲ್ಲಿಕಾರ್ಜುನ ಮುತ್ಯಾ, ಮುಚಳಂಬನ ಶ್ರೀ ಪ್ರಣವಾನಂದ ಸ್ವಾಮೀಜಿ, ಆಣದೂರಿನ ಪೂಜ್ಯ ಜ್ಞಾನಸಾಗರ ಭಂತೆ, ಬೀರಲಿಂಗೇಶ್ವರ ಮತ್ತು ಕನಕ ಗುರು ಪೀಠದ ಶಾಖಾ ಮಠದ ಶ್ರೀ ಬೀರಪ್ಪ ಮುತ್ಯಾ ಸಾನ್ನಿಧ್ಯ ವಹಿಸಿದ್ದರು.

ಮಾಜಿ ಎಂಎಲ್ಸಿ ಅರವಿಂದಕುಮಾರ ಅರಳಿ, ಜಿಪಂ ಮಾಜಿ ಸದಸ್ಯರಾದ ಸುಧೀರ ಕಾಡಾದಿ, ಆನಂದ ಪಾಟೀಲ್, ತಾಪಂ ಮಾಜಿ ಅಧ್ಯಕ್ಷ ಸಿದ್ರಾಮ ಕಾಮಣ್ಣ, ಸಂಘಟನೆಯ ರಾಜ್ಯ ಉಪಾಧ್ಯಕ್ಷ ಮಲಿಕನಾತ ಮಡಿಗೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಹಳ್ಳೀಖೇಡೆ, ಪ್ರಮುಖರಾದ ಪ್ರದೀಪ ವಾತಡೆ, ದೀಪಕ ಗಾಯಕವಾಡ, ಸಂಜುಕುಮಾರ ಸುಗರೆ, ಶ್ರೀನಿವಾಸರೆಡ್ಡಿ, ಎಪಿಎಂಸಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಶಿವಕುಮಾರ ಬಿರಾದಾರ, ಪ್ರದೀಪ ಹೆಗ್ಡೆ, ಮಿಲಿಂದ ಕುಲ್ಕರ್ಣಿ, ಜ್ಞಾನೇಶ್ವರ ರಾಚಪ್ಪನೋರ, ರಾಹುಲ ಸೈದಾಪುರ, ಅಂಬ್ರೀಶ ಸ್ವಾಮಿ, ಲೋಕೇಶ ಮೋಳಕೆರೆ, ಪಪ್ಪರಾಜ ಚತುರೆ, ಪರಮೇಶ ಕಾಳಮಂದರಗಿ ಇದ್ದರು.

ಸಂಘಟನೆಯ ಜಿಲ್ಲಾಧ್ಯಕ್ಷ ಸಂಗಮೇಶ ಭೂರೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ತಾಲೂಕು ಅಧ್ಯಕ್ಷ ನವನಾಥ ಮೇತ್ರೆ ವಂದಿಸಿದರು. ದೀಪಕ ಠಮಕೆ ನಿರೂಪಣೆ ಮಾಡಿದರು.ರ‍್ಯಾಲಿ: ಸಮ್ಮೇಳನಕ್ಕೂ ಮುನ್ನ ನಗರದ ಕೋಟೆಯಿಂದ ಮುಖ್ಯ ರಸ್ತೆ ಮಾರ್ಗವಾಗಿ ಕಾರ್ಯಕ್ರಮದ ವೇದಿಕೆಯವರೆಗೆ ಬೈಕ್ ರ‍್ಯಾಲಿ ನಡೆಸಲಾಯಿತು.

ಬಡವರ ಧ್ವನಿ ಆಗಲಿ: ಸಂಘಟನೆಯನ್ನು ಬಲಪಡಿಸುವ ಜತೆಗೆ ಸಂಘಟನೆಯ ಯುವಕರು ಬಡವರ ಧ್ವನಿ ಆಗಬೇಕು. ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂದು ಯುವ ಕ್ರಾಂತಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಗುಂಡುರೆಡ್ಡಿ ಕಮಲಾಪುರೆ ಹೇಳಿದರು. ಕಚೇರಿಗಳಲ್ಲಿ ಹಣವಿಲ್ಲದೇ ಕೆಲಸ ಆಗದು ಎನ್ನುವ ಪರಿಸ್ಥಿತಿ ಇದೆ. ಯುವಕರು ಜಾಗೃತರಾಗಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಹೋರಾಟ ಮಾಡುವ ಹಕ್ಕು ಎಲ್ಲರಿಗೂ ಇದೆ. ಅನ್ಯಾಯ ಕಂಡು ಬಂದಾಗ ಧ್ವನಿ ಎತ್ತುವ ಮೂಲಕ ನ್ಯಾಯ ಕಲ್ಪಿಸಲು ಮುಂದಾಗಬೇಕು ಎಂದು ಯುವಕರಿಗೆ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net