

ಸುರಪುರ: ಸಂಘಟನೆಗಳು ಸಮಾಜ ತಿದ್ದುವ ಕೆಲಸದ ಜತೆಗೆ ಶೋಷಿತರಿಗೆ ನೆರವಾಗಬೇಕು ಎಂದು ಜಿಲ್ಲಾ ಯುತ್ ಕಾಂಗ್ರೆಸ್ ಅಧ್ಯಕ್ಷ ರಾಜಾ ಕುಮಾರನಾಯಕ ಹೇಳಿದರು.
ನಗರದ ಅರ್ಬನ್ ಬ್ಯಾಂಕ್‌ನಲ್ಲಿ ಸೋಮವಾರ ಹಮ್ಮಿಕೊಂಡ ದಲಿತ ಸಂಘರ್ಷ ಸಮಿತಿ ನೂತನ ತಾಲೂಕು ಸಮಿತಿ ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜನರ ಸಮಸ್ಯೆ ಪರಿಹರಿಸಲು ಸಂಘಟನೆಗಳು ಅಗತ್ಯವಾಗಿದ್ದು, ಇದರ ಜತೆಗೆ ಸಮಾಜ ತಿದ್ದುವ ಕೆಲಸ ಕೂಡ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ದುಶ್ಚಟಗಳಿಗೆ ಬಲಿಯಾಗದೆ ಮಕ್ಕಳಿಗೆ ಶಿಕ್ಷಣ ನೀಡಬೇಕು. ದಲಿತರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸರ್ಕಾರದ ಸೌಲಭ್ಯ ಪಡೆದುಕೊಳ್ಲಬೇಕು. ನಿಮ್ಮ ಯಾವುದೇ ಸಮಸ್ಯೆಗಳಿದ್ದರೆ ಅವುಗಳಿಗೆ ಸ್ಪಂದಿಸಲು ನಾವು ಸದಾ ಸಿದ್ಧನಾಗಿz್ದೆÃನೆ ಎಂದರು.
ಪದಾಧಿಕಾರಿಗಳು: ಮಲ್ಲು ಕಟ್ಟಿಮನಿ (ಸಂಚಾಲಕ), ಮಾನಪ್ಪ ಬಳಬಟ್ಟಿ, ಮುದಕಪ್ಪ ಕಿರದಳ್ಳಿ, ಮಲ್ಲು ಮುಷ್ಟಳ್ಳಿ, ವೈಜನಾಥ ಹೊಸ್ಮನಿ, ರಾಯಪ್ಪ ಕರಡಕಲ್, ಗಿರೀಶ ಶಾಖನವರ, ಮಲ್ಲಪ್ಪ ಬೊಮ್ಮನಹಳ್ಳಿ (ಪದಾಧಿಕಾರಿಗಳು). ಈ ವೇಳೆ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಮತ್ತು ಗೃಹರಕ್ಷಕ ದಳದ ಕಮಾಂಡೆAಟ್ ವೆಂಕಟೇಶ್ವರ ಸುರಪುರ ಅವರನ್ನು ಸನ್ಮಾನಿಸಲಾಯಿತು.
ನಗರಸಭೆ ಮಾಜಿ ಸದಸ್ಯ ವೆಂಕಟೇಶ ಹೊಸ್ಮನಿ, ಜಿಲ್ಲಾ ಸಂಚಾಲಕ ಹಣಮಂತ ಹೊಸ್ಮನಿ, ಭೀಮರಾಯ ಹೊಸ್ಮನಿ, ವೆಂಕೋಬ ದೊರೆ, ಆದಪ್ಪ ಹೊಸ್ಮನಿ, ಭೀಮು ನಾಯಕ ಮಲ್ಲಿಭಾವಿ, ಶ್ರೀನಿವಾಸ ನಾಯಕ ಬೊಮ್ಮನಹಳ್ಳಿ, ಈಶ್ವರ ರೋಜಾ, ಜಿಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ಪೂಜಾರಿ, ದ್ಯಾನಪ್ಪ ಕಟ್ಟಿಮನಿ ಲಕ್ಷ್ಮೀಪುರ, ಪರಶುರಾಮ ದೊಡ್ಡಮನಿ ಇತರರಿದ್ದರು.