ಸಂಘಟನಾ ಶಕ್ತಿಯೇ ಬಿಜೆಪಿಯ ಬಲ

23 skp4
ಶಿಕಾರಿಪುರ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಭಾರತೀಯ ಜನಸಂಘದ ಸಂಸ್ಥಾಪಕ ಡಾ. ಶ್ಯಾಮಪ್ರಸಾದ್ ಮುಖರ್ಜಿ ಸ್ಮತಿ ದಿನದಂದು ನಾಯಕರ ಭಾವಚಿತ್ರಗಳಿಗೆ ಬಿ.ವೈ.ವಿಜಯೇಂದ್ರ ಪುಷ್ಪನಮನ ಸಲ್ಲಿಸಿದರು. ಕೆ.ಎಸ್.ಗುರುಮೂರ್ತಿ, ಹನುಮಂತಪ್ಪ ಇತರರಿದ್ದರು.
Published on

ಶಿಕಾರಿಪುರ: ಶಿಸ್ತು, ಸಿದ್ಧಾಂತಗಳ ಮೂಲಕ ಭಾರತೀಯ ಜನತಾ ಪಕ್ಷವನ್ನು ಅತ್ಯಂತ ಬಲಿಷ್ಠವಾಗಿ ಸಂಘಟಿಸಿದ ಹಿರಿಯರನ್ನು ಸ್ಮರಣೆ ಮಾಡುವ ಜತೆಗೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ತಾಲೂಕಿನ ಬಿಜೆಪಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಭಾರತೀಯ ಜನಸಂಘದ ಸಂಸ್ಥಾಪಕ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಸ್ಮತಿ ದಿನ ಹಾಗೂ ಪ್ರಖರ ರಾಷ್ಟ್ರೀಯವಾದಿ ಜಗನ್ನಾಥ್‌ರಾವ್ ಜೋಶಿ ಅವರ ಜನ್ಮಸ್ಮರಣೆಯಲ್ಲಿ ನಾಯಕರ ಭಾವ ಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಭಾರತೀಯ ಜನತಾ ಪಕ್ಷ ಎಲ್ಲ ರಾಜಕೀಯ ಪಕ್ಷಗಳಿಗಿಂತಲೂ ಅತಿ ಹೆಚ್ಚು ಸದಸ್ಯ ಬಲವನ್ನು ಹೊಂದಲು ಕಾರಣ ಡಾ. ಶ್ಯಾಮಪ್ರಸಾದ್ ಮುಖರ್ಜಿ ಮತ್ತು ಜಗನ್ನಾಥ್‌ರಾವ್ ಜೋಶಿ ಅವರ ಸಂಘಟಿತವಾದ ಶಕ್ತಿ ಮತ್ತು ಸಂಕಲ್ಪ ಶಕ್ತಿ. ಸಾಮಾನ್ಯ ಕಾರ್ಯಕರ್ತನ ಶ್ರಮದಿಂದ ಪಕ್ಷ ಬೆಳೆದಿದೆ. ಇಬ್ಬರು ಮಹಾನ್ ನಾಯಕರು ತಳಮಟ್ಟದ ಕಾರ್ಯಕರ್ತರ ಮೇಲೆ ಇಟ್ಟ ವಿಶ್ವಾಸ, ನಂಬಿಕೆ ಮತ್ತು ನೀಡಿದ ಪ್ರೋತ್ಸಾಹದಿಂದ ಪಕ್ಷ ದೊಡ್ಡ ಶಕ್ತಿಯಾಗಿ ಬೆಳೆದಿದೆ ಎಂದು ತಿಳಿಸಿದರು.

ಭಾರತೀಯ ಜನತಾಪಕ್ಷ ತನ್ನ ಪ್ರಖರವಾದ ರಾಷ್ಟ್ರೀಯ ಸಿದ್ದಾಂತಗಳ ಅಡಿಪಾಯದ ಮೇಲೆ ಬೆಳೆದಿದೆ. ಬಿಜೆಪಿ ತನ್ನ ಸಿದ್ದಾಂತಗಳಿಂದ ವಿಮುಖವಾಗುವದಿಲ್ಲ. ನಮಗೆ ರಾಷ್ಟ್ರದ ಅಭಿವೃದ್ಧಿ ಬಹಳ ಮುಖ್ಯ. ಎಂತಹ ಸಂಕಷ್ಟ ಬಂದರೂ ಸಿದ್ದಾಂತದಿಂದ ದೂರ ಸರಿಯುವದಿಲ್ಲ. ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ಹನುಮಂತಪ್ಪ, ಮಲೆನಾಡು ಅಭಿವೃದ್ಧಿ ಪ್ರಾಕಾರದ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಮತ್ತು ಪಕ್ಷದ ವಿವಿಧ ವಿಭಾಗಗಳ ಪದಾಕಾರಿಗಳು, ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಹಿರಿಯರು ಬಿಜೆಪಿ ಪಕ್ಷವನ್ನು ಅದದ್ಭುತವಾದ ರಾಷ್ಟ್ರೀಯ ಚಿಂತನೆಗಳ ಅಡಿಪಾಯದ ಮೇಲೆ ಕಟ್ಟಿ ಬೆಳೆಸಿದ್ದಾರೆ. ಜನ ಆಶೀರ್ವಾದ ನೀಡಿ ಕೇಂದ್ರದಲ್ಲಿ ಮತ್ತು ದೇಶದ ಬಹುತೇಕ ರಾಜ್ಯಗಳಲ್ಲಿ ಪಕ್ಷಕ್ಕೆ ಅಕಾರ ದೊರೆಯುವಂತೆ ಮಾಡಿದ್ದಾರೆ. ಕಾರ್ಯಕರ್ತರ ಪಕ್ಷ ನಮ್ಮದು.

ಬಿ.ವೈ.ವಿಜಯೇಂದ್ರ

ಬಿಜೆಪಿ ರಾಜ್ಯಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net