ಸಂಘಟನಾ ಚತುರರಾಗಿದ್ದ ಎಸ್.ಬಿ.ಗೊಂಡಬಾಳ; ಸಾಹಿತಿ ಡಾ.ಮಹಾಂತೇಶ ಮಲ್ಲನಗೌಡ ನೆನಪು

21KKNR-02
Published on

ಕೊಪ್ಪಳ: ನಗರದ ಸರದಾರಗಲ್ಲಿ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಕಸಾಪ ಜಿಲ್ಲಾ ಹಾಗೂ ತಾಲೂಕು ಘಟಕದಿಂದ ಸಂಗೀತ ದಿಗ್ಗಜ ಶಿವಮೊಗ್ಗ ಸುಬ್ಬಣ್ಣ, ವಿಮರ್ಶಕ ಎಂ.ಎಚ್.ಕೃಷ್ಣಯ್ಯ, ಕೊಪ್ಪಳದ ಕವಿ, ಸಾಹಿತಿ ಎಸ್.ಬಿ.ಗೊಂಡಬಾಳಗೆ ನುಡಿ ನಮನ ಸಲ್ಲಿಸಲಾಯಿತು. ಸಾಹಿತಿ ಡಾ.ಮಹಾಂತೇಶ ಮಲ್ಲನಗೌಡರ ಮಾತನಾಡಿ, ಎಸ್.ಬಿ.ಗೊಂಡಬಾಳ ಸ್ನೇಹ ಜೀವಿ, ಸಂಘಟನಾ ಚತುರರಾಗಿದ್ದರು. ಸಮ್ಮೇಳನ ಸಂಘಟಿಸುವುದು ಹಬ್ಬದ ಸಂಭ್ರಮದಂತೆ ಆಸ್ವಾದಿಸುವ ಗುಣ ಹೊಂದಿದ್ದರು ಎಂದರು. ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಮಾತನಾಡಿದರು. ಕಸಾಪ ತಾಲೂಕು ಅಧ್ಯಕ್ಷ ರಾಮಚಂದ್ರಗೌಡ ಗೊಂಡಬಾಳ, ಪ್ರಮುಖರಾದ ವೀರೇಶ್ ಬಂಗಾರ ಶೆಟ್ಟರ್, ಬಾಲದಂಡಪ್ಪ ತಳವಾರ, ರಮೇಶ ಕುಲಕರ್ಣಿ, ಚನ್ನಬಸಪ್ಪ ಕಡ್ಡಿಪುಡಿ, ಶೇಖರಗೌಡ ಪಾಟೀಲ್, ಸಂಗಪ್ಪ ಚಕ್ರಸಾಲಿ, ಬಸವರಾಜ ಶಿರಗುಪ್ಪಿ ಶೆಟ್ಟರ್, ಮಲ್ಲಿಕಾರ್ಜುನ ಹ್ಯಾಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net