ಸಂಘಗಳ ಅಭಿವೃದ್ಧಿಗೆ ಸದಸ್ಯರ ಪಾಲ್ಗೊಳ್ಳುವಿಕೆ ಮುಖ್ಯ

17spt2
Published on

ಸೋಮವಾರಪೇಟೆ: ಸಂಘ, ಸಂಸ್ಥೆಗಳ ಸದಸ್ಯರು ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಾಗ ಮಾತ್ರ ಸಂಘಗಳ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ. ಮಲ್ಲಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಮಹಿಳಾ ಸಮಾಜದ ಸಭಾಂಗಣದಲ್ಲಿ ಮಂಗಳವಾರ ನಡೆದ ಸರ್ಕಾರಿ ನಿವೃತ್ತ ನೌಕರರ ಸಂಘದ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರಿ ನೌಕರರ ಆರೋಗ್ಯ ಸಂಜೀವಿನಿ ಸೇವೆಯನ್ನು ನಿವೃತ್ತರಿಗೂ ವಿಸ್ತರಿಸಬೇಕು ಎಂದು ಹೇಳಿದರು. ಸಂಘದಲ್ಲಿ 150 ಜನ ಸದಸ್ಯರಿದ್ದಾರೆ. ಪ್ರಸಕ್ತ ಸಾಲಿನಲ್ಲಿ 20 ಮಂದಿ ಹೊಸ ಸದಸ್ಯತ್ವ ಪಡೆದಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯರಾದ ಕೆ.ಟಿ.ಚೆಲುವೇಗೌಡ, ಎ.ಬಿ. ಶಿವದೇವಿ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಸಿ.ಕೆ.ಮಲ್ಲಪ್ಪ ಅವರು ಬರೆದ ‘ನಾಡ ಹನಿ’ ಕಥಸಂಕಲನವನ್ನು ಗೌರವ ಅಧ್ಯಕ್ಷ ಹಾಲೇಬೇಲೂರು ನಿರ್ವಾಣಿಶೆಟ್ಟಿ ಬಿಡುಗಡೆ ಮಾಡಿದರು. ಸಹ ಕಾರ್ಯದರ್ಶಿ ಎಸ್.ಬಿ. ರಾಜಪ್ಪ ವರದಿ ಮಂಡಿಸಿದರು.

ಕಾರ್ಯದರ್ಶಿ ಬಿ.ಎಂ ಆನಂದ ಸ್ವಾಗತಿಸಿ, ಖಜಾಂಜಿ ಎಸ್. ಆರ್. ಕೆಂಚೇಗೌಡ ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕರಾದ ಎಚ್.ಎನ್. ತಂಗಮ್ಮ ಕಳೆದ ಸಾಲಿನ ಮಹಾಸಭೆ ವರದಿಯನ್ನು ನೀಡಿದರು. ಟಿ.ಕೆ.ಮಾಚಯ್ಯ ನಿರೂಪಿಸಿದರು. ಎಚ್.ಜಿ.ಕುಟ್ಟಪ್ಪ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net