ಸಂಘ-ಸಂಸ್ಥೆಗಳು ಋಣಿಯಾಗಿರಲಿ

14BELAVADI1
Published on

ಮಲ್ಲಮ್ಮನ ಬೆಳವಡಿ: ಸಂಘ-ಸಂಸ್ಥೆಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು. ಶಿಕ್ಷಣ ನೀಡಲು ಹಾಗೂ ನಿರ್ಗತಿಕರ ಒಳತಿಗಾಗಿ ಶ್ರಮಿಸುವಂತಿರಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಗ್ರಾಮದ ಬೆಳವಡಿ ಮಲ್ಲಮ್ಮ ಶೇಷ್ಠ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೆಳಕು ಗ್ರಾಮಾಭಿವದ್ಧಿ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು. ಡಾ. ದೇವೇಂದ್ರ ಗರಗದ ಅಧ್ಯಕ್ಷತೆ ವಹಿಸಿದ್ದರು. ವೇದ ಮೂರ್ತಿ ವಿರೂಪಾಕ್ಷ ಅಜ್ಜ ಆಶೀರ್ವಚನ ನೀಡಿದರು.

ಕಸಾಪ ಅಧ್ಯಕ್ಷ ಎನ್.ಆರ್. ಟಕಾಯಿ, ಧರ್ಮಸ್ಥಳ ಸಂಘದ ಯೋಜನಾಧಿಕಾರಿ ವಿಜಯಕುಮಾರ್, ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಕಾರಿಮಣಿ, ಪ್ರಾಚಾರ್ಯ ಮಹಾಂತೇಶ ಉಪ್ಪಿನ, ರುದ್ರಯ್ಯ ರೊಟ್ಟಯ್ಯನವರ, ಬಸಯ್ಯ ವಿರಕ್ತಮಠ, ಜಿಪಂ ಮಾಜಿ ಸದಸ್ಯ ಶಂಕರ ಮಾಡಲಗಿ, ನಿಂಗಪ್ಪ ಕರಿಕಟ್ಟಿ, ನಿವತ್ತ ಶಿಕ್ಷಕ ವಿ.ಎಸ್. ಅಂಗಡಿ ಉಪಸ್ಥಿತರಿದ್ದರು. ವಕೀಲ ದುಂಡೇಶ್ ಗರಗದ ಸ್ವಾಗತಿಸಿ ವಂದಿಸಿದರು. ನಾಗಮ್ಮ ಚರಂತಿಮಠ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net