ಸಂಘ ಪರಿವಾರದ ಕಾರ್ಯಕರ್ತರ ವಿರುದ್ಧ ಕ್ರಮಕ್ಕೆ ಒತ್ತಾಯ

24 ckm 8 mustafa aldur
ಎಸ್‌ಡಿಪಿಐ ಪಕ್ಷದ ಜಿಲ್ಲಾಧ್ಯಕ್ಷ ಮುಸ್ತಫಾ ಆಲ್ದೂರು
Published on

ಚಿಕ್ಕಮಗಳೂರು: ಅಚಾತುರ್ಯದಿಂದ ಸಂಭವಿಸಿದ ಘಟನೆ ಹಿನ್ನೆಲೆಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಮನಬಂದAತೆ ಥಳಿಸಿರುವುದು ಹಾಗೂ ಎಸ್‌ಡಿಪಿಐ ಪಕ್ಷದ ಬಾವುಟಕ್ಕೆ ಅಪಮಾನ ಮಾಡಿರುವ ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಪೊಲೀಸರು ಕೂಡಲೇ ಕಾನೂನು ಕ್ರಮಕೈಗೊಳ್ಳಬೇಕು. ತಪ್ಪಿದಲ್ಲಿ ಹೋರಾಟ ಅನಿವಾರ್ಯವಾಗಲಿದೆ ಎಂದು ಎಸ್‌ಡಿಪಿಐ ಪಕ್ಷದ ಜಿಲ್ಲಾಧ್ಯಕ್ಷ ಮುಸ್ತಫಾ ಆಲ್ದೂರು ಎಚ್ಚರಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಅ.೩ರಂದು ನಗರದ ವಿಜಯಪುರ ಬಡಾವಣೆಯಲ್ಲಿ ೧೬ ವರ್ಷದ ಬಾಲಕ ಸೆಂಟಿನ ಬಾಟಲಿ ಹಿಡಿದುಕೊಂಡು ಆಟವಾಡುತ್ತಿದ್ದ ವೇಳೆ ತಿಳಿಯದೇ ಹಸುವಿನ ಬಾಲಕ್ಕೆ ಸೆಂಟ್ ಸ್ಪೆçà ಮಾಡಿದ್ದಾನೆ. ಇದರಿಂದಾಗಿ ಹಸುವಿನ ಬಾಲಕ್ಕೆ ಗಾಯವಾಗಿದೆ. ಇದನ್ನೇ ನೆಪ ಮಾಡಿಕೊಂಡ ಸಂಘಪರಿವಾರದ ಸಂತೋಷ್ ಕೋಟ್ಯಾನ್ ಹಾಗೂ ಶ್ಯಾಮ್ ಎಂಬುವರು ಸ್ಥಳಕ್ಕೆ ಬಂದು ಬಾಲಕನಿಗೆ ಮನಬಂಧAತೆ ಥಳಿಸಿದ್ದಾರೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಬಾಲಕನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದರು.

ಬಾಲಕನ ವಿರುದ್ಧ ಪೊಲೀಸರಿಗೆ ದೂರು ನೀಡದೇ ಕಾನೂನನ್ನು ಕೈಗೆತ್ತಿಕೊಳ್ಳಲು ಸಂಘಪರಿವಾರದ ಸದಸ್ಯರಿಗೆ ಅಧಿಕಾರ ನೀಡಿದವರು ಯಾರು? ಎಂದು ಪ್ರಶ್ನಿಸಿದ ಅವರು, ಹಲ್ಲೆ ಸಂಬAಧ ಪೊಲೀಸರಿಗೆ ದೂರು ನೀಡಿದರೂ ಪೊಲೀಸರು ಸಂಘಪರಿವಾರದ ಮುಖಂಡರ ಒತ್ತಡಕ್ಕೆ ಮಣಿದು ದೂರು ದಾಖಲಿಸಲು ಮೀನಮೇಷ ಎಣಿಸಿದ್ದಾರೆ. ಪಕ್ಷದ ಸದಸ್ಯರು, ಮುಖಂಡರ ಒತ್ತಡದ ಬಳಿಕ ಪೊಲೀಸರು ಹಲ್ಲೆ ಮಾಡಿದವರ ವಿರುದ್ಧ ದೂರು ದಾಖಲಿಸಿಕೊಂಡಿದ್ದರೂ ಆರೋಪಿಗಳನ್ನು ಇದುವರೆಗೂ ಬಂಧಿಸಿಲ್ಲ. ಪೊಲೀಸರು ಹಲ್ಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.

ಪಕ್ಷದ ತಾಲೂಕು ಅಧ್ಯಕ್ಷ ಅಜ್ಮತ್ ಪಾಶ ಮಾತನಾಡಿ, ಈ ಘಟನೆ ಸಂಬAಧ ಸಂಘಪರಿವಾರದವರು ಧರಣಿ ನಡೆಸಿದ್ದಾರೆ. ಧರಣಿ ವೇಳೆ ಎಸ್‌ಡಿಪಿಐ ಪಕ್ಷದ ಬಾವುಟಕ್ಕೆ ಅಪಮಾನವಾಗುಂತಹ ಬರಹಗಳನ್ನು ಪ್ರದರ್ಶಿಸಿದ್ದಾರೆ. ಪಕ್ಷದ ಚಿಹ್ನೆ ಮತ್ತು ಬಾವುಟಕ್ಕೆ ಅಪಮಾನ ಮಾಡಿದ ಘಟನೆ ಸಂಬAಧ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ತಪ್ಪಿದಲ್ಲಿ ಹೋರಾಟ ಅನಿವಾರ್ಯವಾಗಲಿದೆ ಎಂದರು.

ಘಟನೆ ಸಂಬAಧ ಕ್ಷೇತ್ರದ ಶಾಸಕ ಎಚ್.ಡಿ.ತಮ್ಮಯ್ಯ ಅವರು ಬಾಲಕನz್ದೆÃ ತಪ್ಪು ಎನ್ನುವ ಮೂಲಕ ಸಂಘಪರಿವಾರದ ವಕ್ತಾರನಂತೆ ಮಾತನಾಡಿದ್ದಾರೆ. ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಮೃಧು ದೋರಣೆ ತಳೆದಿದ್ದಾರೆ. ಶಾಸಕರ ಈ ವರ್ತನೆಯನ್ನು ಖಂಡಿಸುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಆದಮ್, ಮುಬಾರಕ್, ಬಾಲಕನ ತಾಯಿ ಶಬಾನಾ, ಶೋಯೆಬ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net