ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಮಾಲಾರ್ಪಣೆ

IMG-20221212-WA0170
Published on

ಹೊಳೆನರಸೀಪುರ : ಕನಕ ಗುರು ಪೀಠ ಮೈಸೂರು ಶಾಖೆಯ ಮಠಾಧೀಶರಾದ ಶ್ರೀ ಶ್ರೀ ಶಿವಾನಂದಪುರಿಸ್ವಾಮೀಜಿ ಅವರು ತಾಲೂಕಿನ ಶ್ರವಣೂರು ಗ್ರಾಮಕ್ಕೆ ಭೇಟಿ ನೀಡಿ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಮಾಲಾರ್ಪಣೆ ಮಾಡಿದರು.

ತಾಲೂಕಿನ ಹಳ್ಳಿ ಮೈಸೂರು ಹೋಬಳಿಯ ಶ್ರವಣೂರು ಗ್ರಾಮದ ಪ್ರಸ್ತುತ ವಿವಾದಿತ ಸಂಗೊಳ್ಳಿ ರಾಯಣ್ಣ ಸ್ತಂಭಕ್ಕೆ ಮಾಲಾರ್ಪಣೆ ಮಾಡಿ ನೆರೆದಿದ್ದ ಸಮುದಾಯ ಬಂಧುಗಳಿಗೆ ಶುಭ ಹಾರೈಸಿ ಮಾತನಾಡಿದ ಅವರು ಕ್ರಾಂತಿವೀರ ಸ್ವಾತಂತ್ರ್ಯ ಹೋರಾಟಗಾರ ಈ ನಾಡಿನ ದೇಶದ ಆಸ್ತಿ ಸಂಗೊಳ್ಳಿ ರಾಯಣ್ಣ ಅವರ ಹೆಸರಿನಲ್ಲಿ ನಿರ್ಮಿಸಿರುವ ವೃತ್ತಕ್ಕೆ ಎಲ್ಲರೂ ಗೌರವ ಸಲ್ಲಿಸುವ ಮೂಲಕ ಶಾಂತಿಯುತವಾಗಿ ಹೋರಾಡೋಣ ಎಂದು ತಿಳಿಸಿದರು.

ಸಮುದಾಯದ ಎಲ್ಲಾ ಮುಖಂಡರು ಶಾಂತಿಯುತವಾಗಿ ನಡೆಯುವ ಮೂಲಕ ಈ ವೃತ್ತವನ್ನು ತೆರವು ಗೊಳಿಸದಂಥೆ ಉಳಿಸಿ ಕೊಳ್ಳೋಣ.ನಾನು ಕೂಡ ನಿಮ್ಮೆಲ್ಲರ ಬೆಂಬಲಕ್ಕೆ ನಿಂತು ಬೇಡಿಕೆ ಈಡೇರಿಕೆಗೆ ಶ್ರಮಿಸೋಣ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕುರುಬ ಸಮಾಜದ ಮುಖಂಡರು ಹಾಗೂ ಸಮುದಾಯ ಬಂಧುಗಳು ನೆರೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net