ಸಂಗೊಳ್ಳಿ ರಾಯಣ್ಣ ಜನ್ಮದಿನಾಚರಣೆ

17Rajesh4
Published on

ಚಾಮರಾಜನಗರ: ದೇಶಪ್ರೇಮಿ ಸಂಗೊಳ್ಳಿರಾಯಣ್ಣ ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದವರು ಎಂದು ಜೈ ಹಿಂದ್ ಪ್ರತಿಷ್ಠಾನದ ಶ್ರೀಕಂಠು ಹೇಳಿದರು.

ನಗರದ ಮಾರಿಗುಡಿ ಮುಂಭಾಗ ಜೈ ಹಿಂದ್ ಪ್ರತಿಷ್ಠಾನದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸಂಗೊಳ್ಳಿರಾಯಣ್ಣ ಜನ್ಮ ದಿನಾಚರಣೆ ಸಮಾರಂಭದಲ್ಲಿ ಸಂಗೊಳ್ಳಿರಾಯಣ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು. ಸಂಗೊಳ್ಳಿರಾಯಣ್ಣ ಕಿತ್ತೂರು ಸಂಸ್ಥಾನಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ಇಂತಹ ನಾಡಪ್ರೇಮಿಯನ್ನು. ನಾವೆಲ್ಲರೂ ಅವರನ್ನು ಸ್ಮರಿಸಬೇಕಾಗುತ್ತದೆ. ಎಂದರು.

ಸ್ವಾತಂತ್ಯದ ಕಿಚ್ಚನ್ನು ಅಂದೇ ಹತ್ತಿಸಿದ ರಾಯಣ್ಣನನ್ನು ನಾವು ನೆನೆಯಲೇಬೇಕು, ರಾಜ್ಯದ ಇತಿಹಾಸದಲ್ಲಿ ಸಂಗೊಳ್ಳಿ ರಾಯಣ್ಣನ ಸಾಹಸ, ಹೋರಾಟ ಸೇರ್ಪಡೆಯಾಗಿದೆ. ತಾಯ್ನಡಿನ ವಿಮೋಚನೆಗಾಗಿ ಹೋರಾಡಿದ ರಾಯಣ್ಣ ನಾಡಪ್ರೇಮಿಯಾಗಿದ್ದರು. ಕಿತ್ತೂರು ರಾಣಿ ಚನ್ನಮ್ಮ ಜೆಲು ಸೇರಿದಾಗ ಅವರ ಬಿಡುಗಡೆಗೆ ಬ್ರಿಟೀಷರ ಮೇಲೆ ಒತ್ತಡ ತರುವ ಯತ್ನ ಮಾಡಿದರು. ಅವರ ಹೋರಾಟ ಯುವಕರಿಗೆ ಮಾದರಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಕೃಷ್ಣಪ್ಪ, ದರ್ಶನ್, ಗುರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net