

ಭಾಲ್ಕಿ: ಸಂಗೀತದಿಂದ ಮಾನಸಿಕ ಒತ್ತಡ ಕಡಿಮೆಯಾಗಿ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ. ಸಂಗೀತಕ್ಕೆ ರೋಗ ನಿವಾರಿಸುವ ಶಕ್ತಿ ಇದೆ ಎಂದು ನಾದಬ್ರಹ್ಮ ಸಂಗೀತ ಸಮಿತಿ ಸಂಚಾಲಕ ಶಿವಾಜಿ ಸಗರ ಹೇಳಿದರು.
ಪಟ್ಟಣದ ದೇವಿ ಮಂದಿರದಲ್ಲಿ ನವರಾತ್ರಿ ಉತ್ಸವ ನಿಮಿತ್ತ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಜಾನಪದ ಗೀತ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಗೀತ ಆಲಿಸುವುದರಿಂದ ಏಕಾಗ್ರತೆ ಮೂಡಿ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಸಂಗೀತದಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕು. ಮಕ್ಕಳಿಗೂ ಸಂಗೀತದಲ್ಲಿ ಆಸಕ್ತಿ ಬರುವಂತೆ ಮಾಡಬೇಕಾಗಿದೆ ಎಂದರು.
ಸಾಹಿತಿ ವೀರಣ್ಣ ಕುಂಬಾರ ಉಪನ್ಯಾಸ ನೀಡಿದರು. ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ ಮಾತನಾಡಿದರು. ನಗರ ಅಧ್ಯಕ್ಷ ಸಂತೋಷ ಬಿ.ಜಿ.ಪಾಟೀಲ್, ನವರಾತ್ರಿ ಸಮಿತಿ ಅಧ್ಯಕ್ಷ ದಿಲೀಪ ಢವಳೆ, ಪ್ರಮುಖರಾದ ನಾರಾಯಣರಾವ ಕಾಳೆ, ರಾಜಕುಮಾರ ಸಾಲಿ, ಗಿಪ್ಸನ್ ಕೋಟೆ, ಕುಪೇಂದ್ರ ಜಗಶೆಟ್ಟೆ, ಚಂದ್ರಕಾAತ ತಳವಾಡೆ, ಮಾಯಾದೇವಿ ಗೋಖಲೆ, ನಂದಕುಮಾರ ಹಡಪದ, ರಮೇಶ ಮಾನಶೆಟ್ಟೆ ಇತರರಿದ್ದರು. ದೀಪಕ ಠಮಕೆ ನಿರೂಪಣೆ ಮಾಡಿದರು.