ಸಂಗೀತದಿಂದ ಮನಸ್ಸಿಗೆ ಉಲ್ಲಾಸ

Photo 2--0004
Published on

ಚಿತ್ರದುರ್ಗ: ಸಂಗೀತ ಮನಸ್ಸಿಗೆ ಉಲ್ಲಾಸ ನೀಡುತ್ತದೆ ಎಂದು ವಿದ್ಯಾವಿಕಾಸ ವಿದ್ಯಾಸಂಸ್ಥೆ ನಿರ್ದೇಶಕ ಎಸ್.ಎಂ.ಪೃಥ್ವೀಶ್ ಹೇಳಿದರು.
ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಂಗೀತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಗೀತ ಸೇರಿ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಕಲಿಕಾಸಕ್ತಿ ಹೆಚ್ಚಲಿದೆ ಎಂದರು.
ಕಾರ್ಯಕ್ರಮವನ್ನು ವಿದ್ಯಾರ್ಥಿ ನಿನಾದ್ ಸೂರ್ಯ ಉದ್ಘಾಟಿಸಿದ. ವಿದ್ಯಾರ್ಥಿನಿಯರಾದ ಸುಪ್ರಿಯಾ ಮತ್ತು ಸಿರಿಗೌರಿ ಪಿ.ಶೆಟ್ಟಿ ವೀಣಾವಾದನ ನಡೆಸಿಕೊಟ್ಟರು.
ನಗರದ ಗಾನಯೋಗಿ ಬಳಗದ ಅಧ್ಯಕ್ಷ ತೋಟಪ್ಪ ಉತ್ತಂಗಿ ಅವರು ಅಲ್ಲಮ ಪ್ರಭು ವಚನಗಳನ್ನು ಹೇಳಿಕೊಟ್ಟರು. ವಿದ್ಯಾರ್ಥಿಗಳು ಭಾವಗೀತೆ, ಜನಪದ ಗೀತೆಗಳನ್ನು ಹಾಡಿದರು.
ವಿದ್ಯಾರ್ಥಿಗಳಾದ ವಿ.ರಿತಿಕಾ, ಕೀರ್ತಿಭೂಷಣ್ ರೆಡ್ಡಿ ನಿರೂಪಿಸಿದರು. ಸಂಸ್ಥೆ ಕಾರ‌್ಯದರ್ಶಿ ಬಿ.ವಿಜಯಕುಮಾರ್, ಎನ್.ಜೆ.ತಿಪ್ಪೇಸ್ವಾಮಿ, ಪಿ.ಬಸವರಾಜಯ್ಯ, ಸಂಗೀತ ಶಿಕ್ಷಕಿ ಜ್ಯೋತಿಗಿರೀಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net