ಸಂಗೀತದಿಂದ ಏಕಾಗ್ರತೆ-ಆನಂದ ಪ್ರಾಪ್ತಿ

Music brings concentration-joy
ವಿಜಯಪುರದ ದಿವಟಗೇರಿ ಗಲ್ಲಿಯ ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಸನ್ನಿಧಾನದಲ್ಲಿ ನಡೆದ ಖ್ಯಾತ ಗಾಯಕ ವಿದ್ವಾಂಸ ಅನಂತ ಕುಲಕರ್ಣಿ ಅವರ ದಾಸವಾಣಿ ಕಾರ್ಯಕ್ರಮವನ್ನು ಡಿವೈಎಸ್‌ಪಿ ಬಸವರಾಜ ಯಲಿಗಾರ ಉದ್ಘಾಟಿಸಿದರು. ಪ್ರಕಾಶ ಅಕ್ಕಲಕೋಟ, ಕಿರಣ ಪಾಟೀಲ, ಸಿಪಿಐ ಮಲ್ಲಯ್ಯ ಮಠಪತಿ ಮತ್ತಿತರರಿದ್ದಾರೆ.
Published on

ವಿಜಯಪುರ: ನಗರದ ದಿವಟಗೇರಿ ಗಲ್ಲಿಯ ರಾಘವೇಂದ್ರ ಸ್ವಾಮಿಗಳ ವೃಂದಾವನ ಸನ್ನಿಧಾನದಲ್ಲಿ ಖ್ಯಾತ ಗಾಯಕ ವಿದ್ವಾಂಸ ಅನಂತ ಕುಲಕರ್ಣಿ ಅವರಿಂದ ಭಾನುವಾರ ಸಂಜೆ ದಾಸವಾಣಿ ಕಾರ್ಯಕ್ರಮ ನೆರವೇರಿತು.

ಸುಶ್ರಾವ್ಯ ಸಂಗೀತ ಹಾಗೂ ಕಂಚಿನ ಕಂಠದ ಮೂಲಕ ಅನಂತ ಕುಲಕರ್ಣಿ ದಾಸರ ಕೀರ್ತನೆಗಳನ್ನು ಪ್ರಸ್ತುತಪಡಿಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಿವೈಎಸ್‌ಪಿ ಬಸವರಾಜ ಯಲಿಗಾರ ಮಾತನಾಡಿ, ಸಂಗೀತಕ್ಕೆ ದೊಡ್ಡ ಶಕ್ತಿ ಇದೆ, ಸಂಗೀತದಿಂದ ಏಕಾಗ್ರತೆ, ಆನಂದ ಮೂಡುತ್ತದೆ, ಸಂಗೀತಕ್ಕೆ ಅನೇಕ ರೋಗ ಗುಣಪಡಿಸುವ ಶಕ್ತಿ ಇದೆ, ಸಂಗೀತ ಆಲಿಸುವ ಅಭ್ಯಾಸ ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದರು.

ಶ್ರೀಮಠದ ಅಧ್ಯಕ್ಷ ಪ್ರಕಾಶ ಅಕ್ಕಲಕೋಟ ಮಾತನಾಡಿ, ದಾಸರ ಕೀರ್ತನೆಗಳು ಜೀವನದ ಕೀರ್ತಿ ಹೆಚ್ಚಿಸುತ್ತವೆ. ಉದಾತ್ತ ಬದುಕಿನ ಸಾರ ಕೀರ್ತನೆಗಳಲ್ಲಿ ಅಡಗಿದೆ, ಭಕ್ತಿಭಾವ, ಸಂಸ್ಕಾರ ಮೂಡಿಸುವಲ್ಲಿ ದಾಸರ ಪದಗಳ ಪಾತ್ರ ಅನನ್ಯ ಎಂದರು.

ಪಾಲಿಕೆ ಸದಸ್ಯ ಕಿರಣ ಪಾಟೀಲ, ಸಿಪಿಐ ಮಲ್ಲಯ್ಯ ಮಠಪತಿ, ಅರ್ಚಕ ಶ್ರೀನಿವಾಸ ಪೂಜಾರಿ, ಡಿ.ಜಿ. ಹರಿದಾಸ, ಎನ್.ಬಿ. ಜೋಶಿ, ವೆಂಕಟೇಶ ಖಾಸನೀಸ್, ಗೋವಿಂದ ದೇಶಪಾಂಡೆ, ವೆಂಕಟೇಶ ಗುಡಿ, ವಿಕಾಸ ಪದಕಿ, ವಿನಾಯಕ ಕುಲಕರ್ಣಿ, ಎಸ್.ಎಸ್. ದೇಸಾಯಿ, ವಾಮನರಾವ ಕುಲಕರ್ಣಿ, ಪ್ರವೀಣ ಜೋಶಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net