

ಕುಂದಗೋಳ: ಸಂಗೀತಗಾರರಿಗೆ ಆಶ್ರಯದಾತರಾಗಿ ಇಡೀ ಜಗತ್ತಿಗೆ ಸುಮಧುರ ಸಂಗೀತ ನೀಡುವಲ್ಲಿ ಅವಿರತವಾಗಿ ಶ್ರಮಿಸಿದ ನಾಡಗೇರ ವಾಡೆಯ ಧಣಿಗಳು ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಬಾಳಿಕಾಯಿ ಹೇಳಿದರು.
ಪಟ್ಟಣದ ನಾಡಗೇರ ವಾಡೆಯಲ್ಲಿ ಶ್ರೀಮಂತ ನಾನಾಸಾಹೇಬ್ ನಾಡಗೇರ ಸೃ್ಮ ಪ್ರತಿಷ್ಠಾನ ಸಮಿತಿಯಿಂದ ಶನಿವಾರ ಆಯೋಜಿಸಿದ್ದ ಸವಾಯಿ ಗಂಧರ್ವರ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸಂಗೀತ ಎಲ್ಲದಕ್ಕೂ ಸದ್ಗುರು ಇದ್ದಂತೆ. ನೊಂದ ಮನಸ್ಸುಗಳಗೆ ಚೈತನ್ಯ ನೀಡುವ ಶಕ್ತಿ ಸಂಗೀತಕ್ಕಿದೆ. ನಾಡಗೇರ ವಾಡೆಯಲ್ಲಿ ಅನೇಕ ದಿಗ್ಗಜರು ಸಪ್ತಸ್ವರವನ್ನು ಕರಗತ ಮಾಡಿಕೊಂಡು ದೇಶದ ಉದ್ದಗಲಕ್ಕೂ ಪ್ರಸ್ತುತ ಪಡಿಸುವ ಮೂಲಕ ವಾಡೆಗೆ ಕೀರ್ತಿ ತಂದಿದ್ದಾರೆ. ಈ ವಾಡೆಯು ಸಂಗೀತದ ಶಕ್ತಿ ಕೇಂದ್ರವಾಗಿದೆ ಎಂದರು. ಇಂಚಗೇರಿ ಸಂಸ್ಥಾನಮಠದ ಗುರೂಜಿ ಡಾ. ಎ.ಸಿ. ವಾಲಿ, ಪ್ರತಿಷ್ಠಾನದ ಅಧ್ಯಕ್ಷ ಅರ್ಜುನ ನಾಡಗೇರ, ಡಾ. ಮಲ್ಲಿಕಾರ್ಜುನ ಬಾಳಿಕಾಯಿ, ಶ್ಯಾಮ್ ದೇಸಾಯಿ ಕಾರ್ಯಕ್ರಮ ಉದ್ಘಾಟಿಸಿದರು. ಪಂಡಿತ ಕೃಷ್ಣೇಂದ್ರ ವಾಡೇಕರ್ ಗಾಯನ ಪ್ರಸ್ತುತ ಪಡಿಸಿದರು. ಕೇಶವ್ ಜೋಶಿ ತಬಲಾ, ಪ್ರಲ್ಹಾದ ದೇಶಪಾಂಡೆ ಹಾಮೋನಿಯಂ ಸಾಥ್ ನೀಡಿದರು.
ಸಂಜೀವ ಕುಲಕರ್ಣಿ, ಸುಶೀಲೇಂದ್ರ ಕುಂದರಗಿ, ಸುನೀಲ ಕರೋಗಲ್, ರವಿ ಕಮಡೊಳ್ಳಿ, ವಾಸು ಗಂಗಾಯಿ, ಮಂಜುನಾಥ ಹಿರೇಮಠ, ಹನುಮಂತಪ್ಪ ರಣತೂರ, ರಾಜಣ್ಣ ಶಿವಳ್ಳಿ, ಇತರರಿದ್ದರು.