ಸಂಗೀತ-ನೃತ್ಯೋತ್ಸವ ಸ್ವಾಗತ ಸಮಿತಿಗೆ ಹೆಬ್ಬಾಳೆ ಅಧ್ಯಕ್ಷ

Hebbale Sanman
Published on

ಬೀದರ್: ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘದಿಂದ ಬರುವ ಮಾರ್ಚ್ 6 ರಂದು ನಗರದ ರಂಗಮಂದಿರದಲ್ಲಿ ಹಮ್ಮಿಕೊಂಡ ಸಂಘದ 18ನೇ ವಾರ್ಷಿಕೋತ್ಸವ, ಪಂಚಾಕ್ಷರ ಗವಾಯಿ ಪುಣ್ಯಸ್ಮರಣೆ, ಪಂಡಿತ ಪುಟ್ಟರಾಜ ಗವಾಯಿ ಪುಣ್ಯಸ್ಮರಣೆ, ರಾಜ್ಯಮಟ್ಟದ ಸಂಗೀತ, ಸಾಹಿತ್ಯ ಮತ್ತು ನೃತ್ಯೋತ್ಸವ ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಪ್ರಥಮ ದರ್ಜೆ ಗುತ್ತಿಗೆದಾರ ಚಂದ್ರಶೇಖರ ಹೆಬ್ಬಾಳೆ ಅವರನ್ನು ಆಯ್ಕೆ ಮಾಡಲಾಗಿದೆ.

ಸಂಘದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ನಂತರ ಪದಾಧಿಕಾರಿಗಳು ಹೆಬ್ಬಾಳೆ ಅವರನ್ನು ಸನ್ಮಾನಿಸಿ ಸಮ್ಮೇಳನಕ್ಕೆ ಆಹ್ವಾನ ನೀಡಿದರು.
ಈ ವೇಳೆ ಸಂಘದ ಅಧ್ಯಕ್ಷ ಪ್ರೊ.ಎಸ್.ವಿ.ಕಲ್ಮಠ ಮಾತನಾಡಿ, ಅಂದು ದಿನವಿಡಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅರ್ಥಪೂರ್ಣವಾಗಿ ಸಮಾರಂಭ ನಡೆಯಲಿದೆ. ನಾಡಿನ ವಿವಿಧೆಡೆಯ ಕಲಾವಿದರು ಪಾಲ್ಗೊಳ್ಳುವರು. ಕಾರ್ಯಕ್ರಮಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.

ಪ್ರಮುಖರಾದ ಪ್ರೊ.ದೇವೇಂದ್ರ ಕಮಲ, ಪ್ರೊ.ಬಿ.ಎಸ್.ಬಿರಾದಾರ, ರಾಜೇಂದ್ರಸಿಂಗ್ ಪವಾರ್, ವಿ.ಎಂ.ಡಾಕುಳಗಿ, ಲಕ್ಷ್ಮಣರಾವ ಆಚಾರ್ಯ, ರಮೇಶ ಕೊಳಾರ್, ವೀರಭದ್ರಪ್ಪ ಉಪ್ಪಿನ್, ಮಹಾರುದ್ರ ಡಾಕುಳಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net