

ಮೈಸೂರು: ನಾದಬ್ರಹ್ಮ ಸಂಗೀತಸಂತ ಸದ್ಗುರು ಶ್ರೀತ್ಯಾಗರಾಜರ 174ನೇ ಆರಾಧನಾ ಅಂಗವಾಗಿ ಮೈಸೂರಿನ ತ್ಯಾಗರಾಜ ರಸ್ತೆಯಲ್ಲಿರುವ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣದಲ್ಲಿ "ಸಾಂಸ್ಕೃತಿಕ ಸಂಗೀತ ಕ್ಷೇತ್ರದಲ್ಲಿ ಶ್ರೀತ್ಯಾಗರಾಜರು" ನುಡಿನಮನ ಕಾರ್ಯಕ್ರಮವನ್ನು ಮೈಸೂರು ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಆಯೋಜಿಸಲಾಯಿತು.
ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ. ಪ್ರಕಾಶ್ ರವರು ಮಾತನಾಡಿ ತ್ಯಾಗರಾಜರು ಶ್ರೀರಾಮದೇವರ ಪ್ರೇರಣೆಯಿಂದ ಸಂಗೀತ ಕ್ಷೇತ್ರದಲ್ಲಿ ಸಾಮ್ರಾಟರಾಗಿ ಪಂಚರತ್ನ ಕೀರ್ತನೆ ಸೇರಿದಂತೆ ಸಾವಿರಾರು ಕೀರ್ತನೆ ವಾಗ್ಮೇಯಕಾರಾದರು, ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ಆಧಾರಸ್ಥಂಭವಾಗಿ ಮತ್ತು ಸಂಗೀತ ಕ್ಷೇತ್ರದಲ್ಲಿ ಧಾರ್ಮಿಕತೆಯ ಮನೋಭಾವ ಬೆಳಸುವಲ್ಲಿ ತ್ಯಾಗರಾಜರ ಕೊಡುಗೆ ಬಹಳಷ್ಟಿದೆ, ಬಹುಮುಖ್ಯವಾಗಿ ಕಲಾಪ್ರದರ್ಶನ ಅಂದರೆ ಸಂಭಾವನೆ ಮುಖ್ಯ ಎನ್ನುವ ಇತ್ತಿಚಿನ ದಿನದಲ್ಲಿ ಆರಾಧ್ಯದೈವ ಶ್ರೀರಾಮನ ಪ್ರೇರಣೆಯಿದ್ದರೆ ಮಾತ್ರ ಕೀರ್ತನೆ ಹಾಡುಗರಿಕೆ ಪ್ರದರ್ಶನ ಎನ್ನುತ್ತಿದ್ದರು ತ್ಯಾಗರಾಜರು ಇಂದಿನ ಕಲಾವಿದರಿಗೆ ಆದರ್ಶ, ತಮಿಳುನಾಡಿನ ರಾಜನೊಬ್ಬ ತ್ಯಾಗರಾಜರನ್ನು ಕರೆಸಿ ಆಸ್ಥಾನದಲ್ಲಿ ಹಾಡಬೇಕೆಂದು ಹಣ ಜಮೀನು ಕೊಡುತ್ತೇನೆ ಎಂದು ಪಟ್ಟುಹಿಡಿದಾಗ ಯಾವುದೇ ಆಮಿಷಕ್ಕೆ ಒಳಗಾಗದೆ ತ್ಯಾಗರಾಜರು ಹೊರಬಂದರು, ಮುಂದಿನ ದಿನದಲ್ಲಿ ತ್ಯಾಗರಾಜ ಆರಾಧನಾ ಕಾರ್ಯಮವನ್ನು ತ್ಯಾಗರಾಜ ರಸ್ತೆಯಲ್ಲೇ ನೂರಾರು ಕಲಾವಿದರ ಸಮ್ಮುಖದಲ್ಲಿ ಆಯೋಜಿಸಲಾಗುವುದು ಎಂದರು
ನಂತರ ಕಾಂಗ್ರೆಸ್ ಯುವ ಮುಖಂಡ ಎನ್. ಎಮ್ ನವೀನ್ ಕುಮಾರ್ ರವರು ಮಾತನಾಡಿ ಸಾಂಸ್ಕೃತಿಕ ರಾಜಧಾನಿ ಮೈಸೂರು ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಸಂಗೀತಸಂತ ತ್ಯಾಗರಾಜರಿಂದ ಪ್ರೇರಿತರಾಗಿ ಸಂಗೀತಾಭ್ಯಾಸ ಕಲಿತು ಜನಪ್ರಿಯರಾದವರು ಬಹಳಷ್ಟಿದ್ದಾರೆ, ಕಳೆದ ನೂರಾರು ವರುಷಗಳ ಹಿಂದೆ ಮೈಸೂರು ಸಂಸ್ಥಾನದ ತ್ಯಾಗರಾಜ ರಸ್ತೆಯ ಸುತ್ತಮುತ್ತಲಿನ ಬಡಾವಣೆಯ ಇತಿಹಾಸವನ್ನು ನೋಡುವದಾದರೆ ವಿದ್ವಾಂಸರು ಅರಮನೆ ಪಂಡಿತರು ಪಕ್ಕವಾದ್ಯ ಕಲಾವಿದರು ಹೆಚ್ಚಿದ್ದರು ಆದರೆ ಅದನ್ನ ಉಳಿಸಿ ಬೆಳಸುವಲ್ಲಿ ಸರ್ಕಾರಗಳು ಇಂತವರ ಮಹನೀಯ ಜಯಂತಿ ಸ್ಮರಣೆಯ ದಿನದಂದು ಅರ್ಥಪೂರ್ಣವಾಗಿ ಆಚರಿಸಬೇಕು, ಕೇವಲ ರಸ್ತೆಗೆ ಹೆಸರಿಟ್ಟು ನಾಮಫಲಕ ಅನಾವರಣ ಮಾಡಿದರೆ ಪದರಯೋಜನವೇನು, ತ್ಯಾಗರಾಜರು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನ ಸ್ಮರಿಸುವಲ್ಲಿ ನಗರಪಾಲಿಕೆ ಜಿಲ್ಲಾಡಳಿತ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು,
ನಂತರ ಬಿಜೆಪಿ ನಗರಾಧ್ಯಕ್ಷ ಟಿಎಸ್. ಶ್ರೀವತ್ಸಣ್ಣ ರವರು ಮಾತನಾಡಿ ಸಂಗೀತ ಕ್ಷೇತ್ರದಲ್ಲಿ ಧರ್ಮಿಕತೆಯ ಭಕ್ತಿ ಬೆಳೆಯಲು ತ್ಯಾಗರಾಜರ ಕೀರ್ತನೆಗಳು ಹೆಚ್ಚು ಪರಿಣಾಮಕಾರಿಯಾಗಿದೆ, ದೇಶವಿದೇಶದಲ್ಲೂ ಸಹ ತ್ಯಾಗರಾಜರ ಆರಾಧನಾ ಪಂಚರತ್ನ ಕೀರ್ತನೆಗಳ ಸಮೂಹ ಗಾಯನಕ್ಕೆ ಸಹಸ್ರಾರು ಮಂದಿ ಸೇರುತ್ತಾರೆ ಎಂದರು
ಇದೇ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷರಾದ ಟಿ ಎಸ್ ಶ್ರೀವತ್ಸ ,ಬಣ್ಣ ಮತ್ತು ಅರಗು ನಿಗಮ ಮಂಡಳಿಯ ಅಧ್ಯಕ್ಷರಾದ ಎನ್ ಪನೀಷ್ ,ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ,ಕಾಂಗ್ರೆಸ್ ಯುವ ಮುಖಂಡರಾದ ಎನ್ ಎಂ ನವೀನ್ ಕುಮಾರ್ ,ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಚ್ ಜಿ ಗಿರಿಧರ್ ,ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಮುಳ್ಳೂರು ಗುರುಪ್ರಸಾದ್ ,ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಗುರುರಾಜ್ ಶೆಣೈ, ಸುಚೀಂದ್ರ ,ಚಕ್ರಪಾಣಿ, ಅಶ್ವಿನ್ ಕೌಂಡಿನ್ಯ ,ಮೈಕ್ ಚಂದ್ರು ,ರಾಜೇಶ್ ಹಾಗೂ ಇನ್ನಿತರರು ಹಾಜರಿದ್ದರು