ಸಂಗೀತ ಆಲಿಸಿದರೆ ಒತ್ತಡ ನಿವಾರಣೆ

18nrp 4
Published on

ಎನ್.ಆರ್.ಪುರ: ಸಂಗೀತ ಆಲಿಸಿದರೆ ಮನಸ್ಸಿನ ಒತ್ತಡ ಕಡಿಮೆಯಾಗಿ ಮನಸ್ಸು ಪ್ರಪುಲ್ಲವಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಸಾಂಸ್ಕೃತಿಕ ರಾಯಬಾರಿ ಕಣಿವೆ ವಿನಯ್ ಹೇಳಿದರು.

ಪಟ್ಟಣದ ಹಳೇ ಅಂಚೆ ಕಚೇರಿ ರಸ್ತೆಯ ದಿ.ಎಚ್.ಎಸ್.ಚಂದ್ರಶೇಖರ್ ಮನೆಯಂಗಳದಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಯಡೇಹಳ್ಳಿ ಗಾನ ಕೋಗಿಲೆ-2025 ಸಿನಿಮಾ ಗೀತೆಗಳ ಸ್ಪರ್ಧೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಸಂಗೀತದಿಂದ ಹಲವು ಗಂಭೀರ ಕಾಯಿಲೆಗಳು ಸಹ ಗುಣಮುಖವಾದ ಉದಾಹರಣೆ ಇದೆ. ಸಂಗೀತಕ್ಕೂ ಮಹಿಳೆಯರಿಗೂ ಅವಿನಾವಭಾವ ಸಂಬಂಧವಿದೆ. ಎನ್.ಆರ್.ಪುರದಲ್ಲಿ ಇಷ್ಟು ಸಂಖ್ಯೆಯ ಗಾಯಕರಾಗಿರುವುದು ಹೆಮ್ಮೆಯ ಸಂಗತಿ ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣೇಶ್, ನಿಕಟಪೂರ್ವ ಅಧ್ಯಕ್ಷ ಎನ್.ಎಂ.ಕಾಂತರಾಜ್, ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ, ಜಿಲ್ಲಾ ಸಂಚಾಲಕ ಬಿ.ನಂಜುಂಡಪ್ಪ, ರಕ್ಷಣಾ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮ ಶ್ರೀನಿವಾಸ್, ಹೋಬಳಿ ಅಧ್ಯಕ್ಷ ಕಾರ್ತಿಕ್ ಕಾರ್ಗದ್ದೆ, ಎಚ್.ಆರ್.ದಿನೇಶ್, ನಂದಿನಿ ಆಲಂದೂರು, ರಂಗಿಣಿ ಯು ರಾವ್,ವಾಣಿ ನರೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net