ಸಂಕಷ್ಟದಲ್ಲಿ ಮೆಕ್ಕೆಜೋಳ ಬೆಳೆಗಾರ

08-4
ಯಲ್ಲಮ್ಮವಾಡಿ ಗ್ರಾಮದಲ್ಲಿ ಕಟಾವು ಮಾಡಿದ್ದ ಮೆಕ್ಕೆಜೋಳ ನೀರಿನಲ್ಲಿ ನೆನೆದಿರುವುದು.
Published on

ಅಥಣಿ ಗ್ರಾಮೀಣ, ಬೆಳಗಾವಿ: ಅಥಣಿ ತಾಲೂಕಿನಲ್ಲಿ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಕಟಾವಿಗೆ ಬಂದಿದ್ದ ಮೆಕ್ಕೆಜೋಳ ನಾಶವಾಗುವ ಭೀತಿ ಎದುರಾಗಿದೆ.
ತಾಲೂಕಿನ ಒಟ್ಟು 11,235 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ. ಅದರಲ್ಲಿ ಕೇವಲ ಶೇ.15 ರೈತರು ಮೆಕ್ಕೆಜೋಳ ಕಟಾವು ಮಾಡಿದ್ದಾರೆ.

ಎರಡು ಗಂಟೆ ಸುರಿದ ಮಳೆಗೆ ತಾಲೂಕಿನ ಖೋತನಟ್ಟಿ, ಯಲ್ಲಮ್ಮವಾಡಿ, ಕೊಕಟನೂರ, ದೇಸಾರಹಟ್ಟಿ, ಬಾಡಗಿ, ಸುಟ್ಟಟ್ಟಿ, ಕಟಗೇರಿ, ಬಡಚಿ, ಅಡಹಳ್ಳಿ, ಕೋಹಳ್ಳಿ, ಅನಂತಪುರ, ಚಮಕೇರಿ, ತಾಂವಶಿ, ಆಜೂರ, ಖಿಳೇಗಾಂವ, ಮದಬಾವಿ ಮಲಾಬಾದ, ರಾಮತೀರ್ಥ, ನಂದಗಾಂವ, ಘಟನಟ್ಟಿ, ಬುರ್ಲಟ್ಟಿ ಸೇರಿ ಹಲವು ಗ್ರಾಮಗಳಲ್ಲಿ ಮೆಕ್ಕೆಜೋಳ ಬೆಳೆದ ಜಮೀನುಗಳಲ್ಲಿ ನೀರು ಸಂಗ್ರಹವಾಗಿದೆ. ಜತೆಗೆ ಮುರಿದಿದ್ದ ತೆನೆಗಳು ಮಳೆಯಿಂದ ನೆನೆದು ಹಾಳಾಗಿವೆ. ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಕಾಳು ಬಿಡುವ ಸಂದರ್ಭದಲ್ಲಿ ಸತತ ಮಳೆ ಬಿದ್ದಿದ್ದರಿಂದ ಮೆಕ್ಕೆಜೋಳದ ಇಳುವರಿಗೆ ಹೊಡೆತ ಬಿದ್ದಿತ್ತು. ಕಳೆದ ಒಂದೆರಡು ವಾರದಿಂದ ಮಳೆ ಬಿಡುವು ಕೊಟ್ಟಿದ್ದರಿಂದ ಹೆಚ್ಚಿನ ರೈತರು ತೆನೆ ಮುರಿದಿದ್ದಾರೆ. ಸದ್ಯ ಸುರಿದ ಮಳೆಯಿಂದ ಮುರಿದ ತೆನೆಗಳು ಹಾಳಾಗುವ ಭೀತಿಯಿದ್ದು, ಸರ್ಕಾರ ಮೆಕ್ಕೆಜೋಳಕ್ಕೆ ಬೆಳೆ ಪರಿಹಾರ ನೀಡುವಂತೆ ತಾಲೂಕಿನ ರೈತರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net