

ಬಾಗೇಪಲ್ಲಿ: ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಗೆ ಲಾಕ್‌ಡೌನ್ ಪರಿಹಾರಧನದಿಂದ ತಾಲೂಕಿನ ಸುಮಾರು 18 ಸಾವಿರ ರೈತರು ವಂಚಿತರಾಗಿದ್ದಾರೆ.
ಕೂಲಿ ಕಾರ್ಮಿಕರ ಕೊರತೆಯಿಂದ ಹೂವು, ಜೋಳ, ಹಣ್ಣು ಮತ್ತು ತರಕಾರಿ ಕಟಾವು ಮಾಡಲು ಸಾಧ್ಯವಾಗದೆ, ಸೂಕ್ತ ಮಾರುಕಟ್ಟೆಯೂ ಇಲ್ಲದೆ ರೈತರು ಸಂಕಷ್ಟಕ್ಕೀಡಾಗಿದ್ದರು. ಈ ಹಿನ್ನೆಲೆಯಲ್ಲಿ ನಷ್ಟಕ್ಕೆ ಗುರಿಯಾಗಿರುವ ರೈತರಿಗೆ ಪರಿಹಾರ ನೀಡಲು ಸರ್ಕಾರ ಅರ್ಜಿ ಸಲ್ಲಿಸುವಂತೆ ಮಾರ್ಗಸೂಚಿ ಹೊರಡಿಸಿದೆ.
ಅದರಂತೆ ಬೆಳೆ ಸಮೀಕ್ಷೆ ನಡೆಸಿ ಅರ್ಹರಮ್ಮು ಗುರುತಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕಾಗಿರುವ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು 2019-20ನೇ ಸಾಲಿನ ಹಿಂಗಾರು ಮತ್ತು ಮುಂಗಾರು ಬೆಳೆ ಸಮೀಕ್ಷೆ ವರದಿಯನ್ನೇ ಆಧಾರವಾಗಿಟ್ಟುಕೊಂಡು ಲಾನುಭವಿಗಳ ಪಟ್ಟಿ ಪ್ರಕಟಿಸಿದ್ದು, ತಾಲೂಕಿನ 18 ಸಾವಿರ ರೈತರು ಸೌಲಭ್ಯದಿಂದ ವಂಚಿತರಾಗಿದ್ದಾರೆ.
ಕಂದಾಯ ಇಲಾಖೆಯಿಂದ ಬೆಳೆ ಸಮೀಕ್ಷೆಗೆ ಅಯ್ಕೆಗೊಂಡಿರುವ ಸ್ಥಳೀಯ ಗುತ್ತಿಗೆ ಸಿಬ್ಬಂದಿ ಅನುಕೂಲಕ್ಕೆ ಅನುಗುಣವಾಗಿ ಮತ್ತು ಕಾಟಾಚಾರಕ್ಕಾಗಿ ಸಮೀಕ್ಷೆ ನಡೆಸಿ ಅಪೂರ್ಣ ವರದಿ ಸಲ್ಲಿಸಿರುವ ಕಾರಣ ಕೆಲ ರೈತರಿಗೆ ಪರಿಹಾರ ಸಿಗುತ್ತಿಲ್ಲ. ಮತ್ತೊಮ್ಮೆಸಮೀಕ್ಷೆ ನಡೆಸಿ ನಷ್ಟದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿ ನ್ಯಾಯ ಓದಗಿಸಬೇಕು. ಕೊಂಡಮಾರಪಲ್ಲಿ ನಾರಾಯಣಸ್ವಾಮಿ, ರೈತ ಚಾಕವೇಲು
ಕಂದಾಯ ಇಲಾಖೆ ಪ್ರತಿ ಬೆಳೆ ಸಮೀಕ್ಷೆ ವರದಿಗೆ 10 ರೂ. ನಿಗದಿಪಡಿಸಿ ಖಾಸಗಿ ವ್ಯಕ್ತಿಯಿಂದ 2019-20ನೇ ಸಾಲಿನ ಹಿಂಗಾರು ಮತ್ತು ಮುಂಗಾರು ಬೆಳೆ ಸಮೀಕ್ಷೆ ನಡೆಸಿದ್ದು, ವರದಿ ಪಡೆದುಕೊಂಡಿದೆ, ಗುತ್ತಿಗೆ ಆಧಾರದಲ್ಲಿ ಸಮೀಕ್ಷೆಗೆ ಮುಂದಾದ ಖಾಸಗಿ ವ್ಯಕ್ತಿ ಕಾಟಾಚಾರಕ್ಕೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿರುವ ಪರಿಣಾಮ ತಾಲೂಕಿನ ಶೇ.40 ರೈತರಿಗೆ ಅನ್ಯಾಯವಾಗಿದೆ.
ತಾಲೂಕಿನಾದ್ಯಂತ ಹಿಂಗಾರು ಮತ್ತು ಮುಂಗಾರು ಬೆಳೆ ಸಮೀಕ್ಷೆ ನಡೆಸಿ ಮೂರು ತಿಂಗಳಾಗಿದೆ, ಬೆಳೆ ಸಮೀಕ್ಷೆ ವರದಿಯಲ್ಲಿ ದೋಷಗಳಿವೆ ಎಂದು ಕೆಲ ರೈತರು ದೂರುತ್ತಿದ್ದಾರೆ, ತಹಸೀಲ್ದಾರ್ ಕಚೇರಿಗೆ ದೂರು ಸಲ್ಲಿಸಿದರೆ, ಸಮಸ್ಯೆ ಕುರಿತು ಚರ್ಚಿಸಿ ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಲ್ಪಿಸುವ ಪ್ರಯತ್ನ ಮಾಡುತ್ತೇವೆ. ಎಂ.ನಾಗರಾಜು. ತಹಸೀಲ್ದಾರ್, ಬಾಗೇಪಲ್ಲಿ. ಗುತ್ತಿಗೆ ಆಧಾರದಲ್ಲಿ ಸ್ವಯಂ ಉದ್ಯೋಗಿಯನ್ನು ಅಯ್ಕೆ ಮಾಡಿ ಕಂದಾಯ ಇಲಾಖೆಯಿಂದ ಬೆಳೆ ಸಮೀಕ್ಷೆ ನಡೆಸಿದ್ದು, 2020ರ ಫೆಬ್ರವರಿಯಲ್ಲಿ ವರದಿ ಸಲ್ಲಿಸಿದ್ದಾರೆ. 24,612 ರೈತರ ಬೆಳೆಯ ೆಟೋ ಅಪ್‌ಲೋಡ್ ಆಗಿದೆ, 5,612 ರೈತರ ಮಾಹಿತಿ ಸರಿಯಾಗಿದೆ, ಉಳಿದವರ ಮಾಹಿತಿ ಲಭ್ಯವಿಲ್ಲದ ಕಾರಣ ಕೃಷಿ ಇಲಾಖೆಗೆ ಸೂಕ್ತ ದಾಖಲೆ ಸಲ್ಲಿಸಬೇಕು. ಕಂದಾಯ ಇಲಾಖೆ ಸಲ್ಲಿಸಿರುವ ಸಮೀಕ್ಷೆ ವರದಿ ಆಧಾರಿತ ಆರ್ಹ ರೈತರಿಗೆ ಪರಿಹಾರ ಹಣ ಅವರ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ. ಕೆ.ಸಿ.ಮಂಜುನಾಥ, ಸಹಾಯಕ ಕೃಷಿ ನಿರ್ದೇಶಕ, ಬಾಗೇಪಲ್ಲಿ