

ಯಾದಗಿರಿ: ಅಕ್ಟೋಬರ್ ತಿಂಗಳಲ್ಲಿ ಜಾರ್ಖಂಡ್ನ ಜೆಮ್ಶೆಡ್ಪುರದಲ್ಲಿ ಜರುಗಲಿರುವ 62ನೇ ರಾಷ್ಟ್ರೀಯ ಓಪನ್ ಹಿರಿಯರ ಅಥ್ಲೇಟಿಕ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಜಿಲ್ಲೆಯ ಯುವ ಕ್ರೀಡಾಪಟು ಲೋಕೇಶ ರಾಠೋಡ್ ಆಥರ್ಿಕ ಸಂಕಷ್ಟ ಎದುರಿಸುತ್ತಿದ್ದು, ತನಗೆ ಸಹಾಯ ಮಾಡುವಂತೆ ಇದೀಗ ದಾನಿಗಳ ಮೊರೆ ಹೋಗಿದ್ದಾನೆ.
21 ವರ್ಷದ ನಾನು ಶಹಾಪುರ ತಾಲೂಕಿನ ಉಕ್ಕಿನಾಳ ತಾಂಡಾ ನಿವಾಸಿ. ಸಧ್ಯ ಬಳ್ಳಾರಿಯ ಜಿಬಿಆರ್ ಕಾಲೇಜಿನಲ್ಲಿ ಬಿ.ಎ ದ್ವಿತೀಯ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದಾನೆ. ಚಿಕ್ಕಂದಿನಿಂದಲೇ ಕ್ರೀಡೆಗಳಲ್ಲಿ ವಿಶೇಷ ಆಸಕ್ತಿ ಹೊಂದಿ ಹೋಬಳಿ, ತಾಲೂಕು ಮತ್ತು ಜಿಲ್ಲಾ ಮಟ್ಟದ ಕ್ರೀಡಾಕೂಟಗಳಲ್ಲಿ ಹತ್ತಾರು ಪ್ರಶಸ್ತಿ ಬಾಚಿಕೊಂಡಿದ್ದೇನೆ. 2017ರಲ್ಲಿ ಪ್ರಥಮ ಬಾರಿಗೆ ದಕ್ಷಿಣ ಭಾರತದ ಅಥ್ಲೇಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ, ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದೇನೆ.
ಕಳೆದ 6 ವರ್ಷಗಳಲ್ಲಿ ನವದೆಹಲಿ, ಪಂಜಾಬ್, ತಮಿಳುನಾಡು, ತೆಲಂಗಾಣ, ಗುಜರಾತ್ ಹೀಗೆ ಹಲವು ರಾಜ್ಯಗಳಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಂಡು ನಾನಾ ಪ್ರಶಸ್ತಿ ಪಡೆದಿರುವೆ. ಅ.11ರಂದು ಜೆಮ್ಶೆಡ್ಪುರದಲ್ಲಿ ಓಪನ್ ಹಿರಿಯರ ಅಥ್ಲೇಟಿಕ್ ಕ್ರೀಡಾಕೂಟಕ್ಕೆ ಆಯ್ಕೆಯಾದ ಕಾರಣ ಈಗಿನಿಂದಲೇ ತಯಾರಿ ನಡೆಸುತ್ತಿದ್ದೇನೆ. ಆದರೆ, ಅಷ್ಟು ದೂರ ತೆರಳಲು ನನ್ನಲ್ಲಿ ಹಣವಿಲ್ಲ. ಇತ್ತ ಕ್ರೀಡಾ ಇಲಾಖೆ ಸಹ ನನ್ನ ಸಹಾಯಕ್ಕೆ ಬಂದಿಲ್ಲ. 2024ರಲ್ಲಿ ಪ್ಯಾರಿಸ್ನಲ್ಲಿ ನಡೆಯುವ ಒಲಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಹಂಬಲವಿದೆ ಎನ್ನುತ್ತಾನೆ.
ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದು, ನನ್ನ ಸಾಧನೆಗೆ ಅಡ್ಡಿಯಾಗುತ್ತಿದೆ. ಹೀಗಾಗಿ ದಾನಿಗಳು ನನ್ನ ಸಾಧನೆಗೆ ಅವಕಾಶ ಮಾಡಿಕೊಡುವಂತೆ (ಎಸ್ಬಿಐ ಬ್ಯಾಂಕ್ ಬೆಂಗಳೂರು ಶಾಖೆ, 36907124001 ಐಎಫ್ಎಸ್ಐ ಕೋಡ್ : ಖಃಓ0040252 (9028394962) ಮನವಿ ಮಾಡಿಕೊಂಡಿದ್ದಾನೆ. ---