ಸಂಕಲ್ಪಶಕ್ತಿ ಇದ್ದರೆ ಸಾಧನೆ ಅಸಾಧ್ಯವಲ್ಲ

14..6
ಕಕಮರಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಮುಕ್ತ ಲಿಖಿತ ರಸಪ್ರಶ್ನೆ ಸ್ಪರ್ಧೆಯಲ್ಲ್ಲಿ ಧಾರವಾಡ ಲೇಖಕ ಎಸ್.ಎನ್.ಸಿಂಪಿಗೇರ ಮಾತನಾಡಿದರು. ಮಲ್ಲಿಕಾರ್ಜುನ ಶೇಡ್ಯಾಳ, ಅರುಣ ಹೊನವಾಡ, ಸಂಗಮೇಶ ಬಿಳ್ಳೂರ ಇತರರಿದ್ದರು.
Published on

ಕಕಮರಿ: ವಿದ್ಯಾರ್ಥಿಗಳಿಗೆ ಸಾಸುವ ಸಂಕಲ್ಪಶಕ್ತಿ ಇದ್ದರೆ ಯಾವುದೂ ಅಸಾಧ್ಯವಲ್ಲ ಎಂದು ಧಾರವಾಡ ಲೇಖಕ ಎಸ್.ಎನ್.ಸಿಂಪಿಗೇರ ಹೇಳಿದರು.

ಗ್ರಾಮದ ಶ್ರೀ ಗುರುದೇವ ಜ್ಞಾನಯೋಗಿ ಗುರುಕುಲ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಥಣಿ ವೀರರಾಣಿ ಚನ್ನಮ್ಮ ಯುವ ಫೌಂಡೇಷನ್ ವತಿಯಿಂದ ಸ್ವಾತಂತ್ರ್ಯೋತ್ಸವ ದಿನದ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಮುಕ್ತ ಲಿಖಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಸಮಯಕ್ಕೆ ಮಹತ್ವ ನೀಡಿ ವ್ಯಾಸಂಗ ಮಾಡಬೇಕು. ಸವಾಲುಗಳು ಎದುರಾದಾಗ ಯೋಚನಾ ಶಕ್ತಿ ಬಳಸಿ ನಿರ್ಧಾರ ಕೈಗೊಳ್ಳಬೇಕು ಎಂದರು.

ನಿವೃತ್ತ ಮುಖ್ಯಶಿಕ್ಷಕ ಎಂ.ಎಸ್.ಬಿಳ್ಳೂರ ಮಾತನಾಡಿ, ಸಾಧನೆಗೆ ನಿರಂತರ ಪ್ರಯತ್ನ, ದಿಟ್ಟತನ, ಪರಿಶ್ರಮ ಮುಖ್ಯ ಊರುಗೋಲುಗಳಾಗಿವೆ ಎಂದರು. ಫೌಂಡೇಷನ್ ಅಧ್ಯಕ್ಷ ಅರುಣ ಹೊನವಾಡ, ಗ್ರಾಪಂ ಸದಸ್ಯ ಮಲ್ಲಿಕಾರ್ಜುನ ಶೇಡ್ಯಾಳ, ಮುಖ್ಯೋಪಾಧ್ಯಾಯ ಸಂಗಮೇಶ ಬಿಳ್ಳೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net