ಸಂಕಲ್ಪ ಸಮಾವೇಶ ಬುಧವಾರ

ctd---0000
Published on

ಚಿತ್ರದುರ್ಗ: ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ಜಿಲ್ಲಾ ಘಟಕದಿಂದ ನ.6ರಂದು ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಬೆಳಗ್ಗೆ 11.30ಕ್ಕೆ ಮಹಿಳೆಯ ಘನತೆ ಮತ್ತು ಮಾನವ ಮೌಲ್ಯ ಉಳಿಸೋಣ ಎಂಬ ಧ್ಯೇಯ ವಾಕ್ಯದೊಂದಿಗೆ ಜಿಲ್ಲಾ ಮಟ್ಟದ ಯುವಜನರ ಸಂಕಲ್ಪ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.

ಪ್ರಾಚಾರ‌್ಯ ಬಿ.ಟಿ.ತಿಪ್ಪೇರುದ್ರಸ್ವಾಮಿ ಸಮಾವೇಶ ಉದ್ಘಾಟಿಸುವರು. ಎಐಡಿವೈಒ ರಾಜ್ಯ ಕಾರ‌್ಯದರ್ಶಿ ಸಿದ್ಧಲಿಂಗ ಬಾಗೇವಾಡಿ ಆಶಯ ನುಡಿಗಳನ್ನಾಡುವರು. ಖಜಾಂಚಿ ಕೆ.ಜಯಣ್ಣ ಪ್ರಾಸ್ತಾವಿಕವಾಗಿ ಮಾತನಾಡುವರು. ಇಂದಿನ ಯುವಮನಸ್ಸಿನ ತಲ್ಲಣಗಳು ಕುರಿತು ಜಿಲ್ಲಾಸ್ಪತ್ರೆ ಮನೋವೈದ್ಯ ಡಾ.ಆರ್.ಮಂಜುನಾಥ್, ಲೈಂಗಿಕ ಅಪರಾಧಗಳು- ಕಾರಣ ಮತ್ತು ಪರಿಹಾರಗಳ ಕುರಿತು ಹೊಸದುರ್ಗದ ವ್ಯಕ್ತಿತ್ವ ವಿಕಸನದ ತರಬೇತುದಾರ ಎಚ್.ಎಸ್.ನವೀನ್‌ಕುಮಾರ್ ವಿಷಯ ಮಂಡಿಸುವರು. ಎಐಡಿವೈಒ ರಾಜ್ಯಉಪಾಧ್ಯಕ್ಷ ಕೆ.ಕೃಷ್ಣ ಅಧ್ಯಕ್ಷತೆ ವಹಿಸುವರು.

...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net