ಸಂಕಲ್ಪ ಸಮಾವೇಶ 30ರಂದು

dss
Published on

ಬೀದರ್: ದಲಿತ ಸಂಘಟನೆಗಳ ಒಕ್ಕೂಟ, ಸಂವಿಧಾನ ಸಂರಕ್ಷಣಾ ಸಮಿತಿ, ಗೊಂಡಪರ, ಕನ್ನಡಪರ ಸಂಘಟನೆಗಳ ಒಕ್ಕೂಟವು ಬೃಹತ್ ಸಂಕಲ್ಪ ಸಮಾವೇಶವನ್ನು ಜ.30ಕ್ಕೆ ಮುಂದೂಡಿದೆ.

ನಗರದ ಅಂಬೇಡ್ಕರ್ ವೃತ್ತ ಹತ್ತಿರ ಗಣರಾಜ್ಯೋತ್ಸವ ನಿಮಿತ್ತ ಮಂಗಳವಾರ ಸಂಜೆ ನಡೆಸಲು ಉದ್ದೇಶಿತ ಸಮಾವೇಶಕ್ಕೆ ಜಿಲ್ಲಾಡಳಿತ ಅನುಮತಿ ನೀಡದ ಹಿನ್ನೆಲೆಯಲ್ಲಿ ಮುಂದಿನ ದಿನಾಂಕ ಪ್ರಕಟಿಸಲಾಗಿದೆ. 30ರಂದು ಜಿಲ್ಲಾಡಳಿತವು ಅಂಬೇಡ್ಕರ್ ವೃತ್ತದ ಹತ್ತಿರ ಜಾಗಕ್ಕೆ ಅನುಮತಿ ನೀಡಬೇಕೆಂದು ಸಮಿತಿ ಪ್ರಮುಖರು ಕೋರಿದ್ದಾರೆ.

ಡಾ. ಅಂಬೇಡ್ಕರ್ ವೃತ್ತದಲ್ಲಿ ಗಣರಾಜ್ಯೋತ್ಸವ ನಿಮಿತ್ತ ಬಾಬಾಸಾಹೇಬರ ಮೂರ್ತಿಗೆ ಪುಷ್ಫನಮನ ಸಲ್ಲಿಸಿದ ನಂತರ ಮಾತನಾಡಿದ ಸಮಾವೇಶ ಸಮಿತಿ ಅಧ್ಯಕ್ಷ ಬಾಬುರಾವ ಪಾಸ್ವಾನ್ ಅವರು, ಸಮಾವೇಶಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅಡ್ಡಿಪಡಿಸಿದವರನ್ನು ಶಿಕ್ಷೆಗೆ ಗುರಿಪಡಿಸಬೇಕು. 30ಕ್ಕೆ ಸಮಾವೇಶ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಬೇಕೆಂದು ಆಗ್ರಹಿಸಿದರು.

ನವದೆಹಲಿಯ ಅಕ್ಕ ಐಎಎಸ್ ಅಕಾಡೆಮಿ ಮುಖ್ಯಸ್ಥ ಡಾ. ಶಿವಕುಮಾರ, ಸಮಿತಿ ಪ್ರಮುಖರಾದ ಅನೀಲ ಬೆಲ್ದಾರ್, ಶಾಲಿವಾನ ಬಡಿಗೇರ, ಕಲ್ಯಾಣರಾವ ಭೋಸ್ಲೆ, ಅಂಬಾದಾಸ ಗಾಯಕವಾಡ, ರಘುನಾಥ ಗಾಯಕವಾಡ, ಶ್ರೀಪತರಾವ ದೀನೆ, ಅರುಣ ಕುದರೆ, ಬಾಬುರಾವ ಮಿಠಾರೆ, ದಿಲೀಪ ಭೋಸ್ಲೆ, ಅಶೋಕಕುಮಾರ ಮಾಳಗೆ, ಬುದ್ಧಪ್ರಕಾಶ ಭಾವಿಕಟ್ಟಿ, ಎಂ.ಪಿ.ಮುದಾಳೆ, ಅರುಣ ಪಟೇಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net