ಬೇಲೂರು: ಪ್ರಾಥಮಿಕ ಕೃಷಿಪತ್ತಿನ ಬೇಲೂರು ಕಸಬಾ ಸಹಕಾರ ಬ್ಯಾಂಕ್‌ನಿಂದ ಕೆಸಿಸಿ ಸಾಲ ಯೋಜನೆಯಡಿ ಶುಕ್ರವಾರ ಸಂಘದ ಕಚೇರಿಯಲ್ಲಿ ಅಧ್ಯಕ್ಷ ಬಿ.ಗಿರೀಶ್ ಷೇರುದಾರರಿಗೆ ಸಾಲದ ಚೆಕ್ ವಿತರಿಸಿದರು.
ಸಾಲಗಾರರಿಗೆ ಚೆಕ್ ವಿತರಿಸಿ ಮಾತನಾಡಿದ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ. ಗಿರೀಶ್, ನಮ್ಮ ಸಂಘದಲ್ಲಿ ನಾಲ್ಕು ಸಾವಿರ ಜನರು ಸದಸ್ಯತ್ವ ಹೊಂದಿದ್ದು, ಇದರಲ್ಲಿ ಈಗಾಗಲೇ ಕೆಲವರಿಗೆ ವಿವಿಧ ಯೋಜನೆಯಡಿ ಸಾಲ ಸೌಲಭ್ಯ ನೀಡಲಾಗಿದೆ. ಅದೇ ರೀತಿ ಎಚ್‌ಡಿಸಿಸಿ ಬ್ಯಾಂಕ್ ಸಹಕಾರದಿಂದ ನಮ್ಮ ಬ್ಯಾಂಕ್‌ನಿಂದ ಕೆಸಿಸಿ ಯೋಜನೆಯಡಿ 45 ಲಕ್ಷ ರೂ., ಸಾಲ ಕೊಡುತ್ತಿದ್ದೇವೆ. ಫಲಾನುಭವಿಗಳು ಉದ್ದೇಶಕ್ಕೆ ಸಾಲ ಪಡೆದಿದ್ದೀರೋ ಅವರು ಅದೇ ಉದ್ದೇಶಕ್ಕೆ ಬಳಸಬೇಕು. ಅಲ್ಲದೆ, ನಮ್ಮ ಸಹಕಾರ ಬ್ಯಾಂಕ್‌ನಿಂದ ಈಗಾಗಲೇ 140 ಜನರಿಗೆ ಹೈನುಗಾರಿಕೆಗೆ 3.70 ಲಕ್ಷ ರೂ. ನೀಡಿದ್ದೇವೆ. ಇದರೊಂದಿಗೆ ಬ್ಯಾಂಕ್‌ನ ಸ್ವಂತ ಹಣದಲ್ಲಿಯೂ ಇತರರಿಗೆ ಸಾಲ ನೀಡಲಾಗಿದೆ. ಜತೆಗೆ ನಮ್ಮ ಬ್ಯಾಂಕ್ ಕಟ್ಟಡ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಸ್ವಂತ ನಿವೇಶನದಲ್ಲಿ ಕಟ್ಟಡ ಕಟ್ಟಲು ಈಗಾಗಲೇ ಸಂಬಂಧಿಸಿದ ಇಲಾಖೆ ಮೂಲಕ ನಬಾರ್ಡ್‌ನಿಂದ 60 ಲಕ್ಷ ರೂ., ಸಾಲ ಪಡೆಯಲು ಸಿದ್ಧತೆ ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಕಟ್ಟಡ ನಿರ್ಮಿಸುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಕಸಬಾ ಸಹಕಾರ ಬ್ಯಾಂಕ್ ಹಿರಿಯ ನಿರ್ದೇಶಕ ಎಸ್.ನಾಗೇಶ್ ಮಾತನಾಡಿದರು. ಎಚ್‌ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ದಿನೇಶ್, ಪ್ರಾಥಮಿಕ ಕೃಷಿಪತ್ತಿನ ಕಸಬಾ ಸಹಕಾರ ಬ್ಯಾಂಕ್ ನಿರ್ದೇಶಕರಾದ ಪುಟ್ಟಸ್ವಾಮಿ, ರಮೇಶ್, ಶಾರದಮ್ಮ, ಲಕ್ಷ್ಮಮ್ಮ, ಹರೀಶ್, ಸೋಮೇಗೌಡ, ಕಾಂತರಾಜು, ಕಾರ್ಯದರ್ಶಿ ಉಮೇಶ್ ಇತರರು ಇದ್ದರು.